Saturday, June 27, 2026
Homeಕರಾವಳಿಬೆಳ್ತಂಗಡಿ: ಉಜಿರೆಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಬೆಳ್ತಂಗಡಿ: ಉಜಿರೆಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಬೆಳ್ತಂಗಡಿ: ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಜಿರೆ ಗ್ರಾಮದ ಸದರ್ನ್ ರಬ್ಬರ್ ಅಂಗಡಿ ಬಳಿ ನಡೆದಿದೆ.

ಪ್ರೈಸ್ ಮ್ಯಾಥ್ಯೂ ಎಂಬವರ ಸದರ್ನ್ ರಬ್ಬರ್ ಅಂಗಡಿಯಲ್ಲಿ ರಬ್ಬರ್ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ ಕೆಲಸದಾಳು ಬಿಹಾರ ಮೂಲದ ಬಬ್ಲುಸಿಂಗ್ (39) ಎಂಬಾತನು ಅಂಗಡಿಯ ಹಿಂಬದಿಯಲ್ಲಿರುವ ರೂಮಿನಲ್ಲಿ ನಂದಲಾಲ್ ಮತ್ತು ಶಿವಾನಂದ ಎಂಬವರೊಂದಿಗೆ ವಾಸವಾಗಿದ್ದ. ವಿಪರೀತ ಅಮಲು ಪದಾರ್ಥ ಸೇವನೆ ಚಟ ಹೊಂದಿದ್ದ ಆತ ನಿನ್ನೆ ಮಧ್ಯಾಹ್ನ 12.30 ವೇಳೆಗೆ ತನ್ನ ರೂಮಿನ ಪಕ್ಕದಲ್ಲಿರುವ ಬಾವಿಕಟ್ಟೆಯ ಮೇಲೆ ಕುಳಿತುಕೊಂಡಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ.

ಈ ಬಗ್ಗೆ ಪ್ರೈಸ್ ಮ್ಯಾಥ್ಯೂ ಅವರು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


- Advertisement -

Latest News

error: Content is protected !!