Thursday, June 4, 2026
Homeತಾಜಾ ಸುದ್ದಿಕುಂದಾಪುರ: ಕೃಷಿ ಗದ್ದೆ ಬಳಿಯಿದ್ದ ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

ಕುಂದಾಪುರ: ಕೃಷಿ ಗದ್ದೆ ಬಳಿಯಿದ್ದ ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಕುಂದಾಪುರ: ದಾರಿಹೋಕರು ತಿರುಗಾಡುವ ನಡೆದಾರಿ ಹಾಗೂ ಕೃಷಿ ಗದ್ದೆ ಬಳಿಯಿದ್ದ ಆವರಣವಿಲ್ಲದ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಕಾಳಾವರ ಗ್ರಾಮಪಂಚಾಯತಿ ವ್ಯಾಪ್ತಿಯ ಸಳ್ವಾಡಿ ಬಳಿಯ ಕರಿಕಲ್ ಕಟ್ಟೆ ಬಸ್ ನಿಲ್ದಾಣದ ಹಿಂಭಾಗ ನಡೆದಿದೆ. ಮೃತರನ್ನು ನಾಡ ಕೋಣ್ಕಿ ನಿವಾಸಿ ರಘುರಾಮ ಶೆಟ್ಟಿ (53) ಎಂದು ಗುರುತಿಸಲಾಗಿದೆ.

ಕೋಣ್ಕಿಯವರಾದ ರಘುರಾಮ ಶೆಟ್ಟಿ ಬಾಗಲಕೋಟೆಯಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದು ಕಳೆದ ಕೆಲ ದಿನಗಳ ಹಿಂದೆ ತಾಯಿ ನಿಧನದ ಹಿನ್ನೆಲೆ ಊರಿಗೆ ಆಗಮಿಸಿದ್ದರು. ಇತ್ತೀಚೆಗೆ ಪತ್ನಿ ಮನೆಯಾದ ಕಾಳಾವಾರದ ಕರಿಕಲ್ ಕಟ್ಟೆಗೆ ಬಂದಿದ್ದ ಅವರು ಸೋಮವಾರ ರಾತ್ರಿ ಇಲ್ಲಿಗೆ ಸಮೀಪ ನಡೆದೆ ಯಕ್ಷಗಾನಕ್ಕೆ ತೆರಳಿದ್ದರು. ಕಾಲಮಿತಿಯ ಯಕ್ಷಗಾನ ಕಂಡು ವಾಪಾಸ್ ಪತ್ನಿ ಮನೆಗೆ ತೆರಳುವಾಗ ಆವರಣವಿಲ್ಲದ ಬಾವಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!