Sunday, May 19, 2024
Homeತಾಜಾ ಸುದ್ದಿಕಾರ್ಕಳ: ಹಿರಿಯ ಯಕ್ಷಗಾನ ಕಲಾವಿದ ಮುಳಿಯಾಲ ಭೀಮ್ ಬಟ್ ನಿಧನ

ಕಾರ್ಕಳ: ಹಿರಿಯ ಯಕ್ಷಗಾನ ಕಲಾವಿದ ಮುಳಿಯಾಲ ಭೀಮ್ ಬಟ್ ನಿಧನ

spot_img
- Advertisement -
- Advertisement -

ಕಾರ್ಕಳ : ತೆಂಕುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಹಿರಿಯ ಕಲಾವಿದ ಮುಳಿಯಾಲ ಬೀಮ್ ಭಟ್ ಅವರು ಇಂದು ಮುಂಜಾನೆ ಕಾರ್ಕಳದ ಕಾಂತಾವರದಲ್ಲಿ ನಿಧನ ಹೊಂದಿದ್ದಾರೆ.


ಕಳೆದ ನಾಲ್ಕು ತಿಂಗಳಿನಿ ಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಇವರಿಗೆ 85 ವರ್ಷ ವಯಸ್ಸಾಗಿತ್ತು. ಭಟ್ಟರು 20 ವರ್ಷಗಳಿಂದ ಕಾಂತಾವರ ದೇವಸ್ಥಾನದಲ್ಲಿ ಸೇವೆಸಲ್ಲಿಸುತ್ತಿದ್ದು, 1951 ರಲ್ಲಿ ಕುರಿಯ ಶಾಸ್ತ್ರಿಗಳ ಸಂಚಾಲಕತ್ವದಲ್ಲಿ ಶ್ರೀ ಧರ್ಮಸ್ಥಳ ಮೇಳದಿಂದ ಕಲಾಜೀವನ ಆರಂಭಿಸಿದರು. ಕೋಡಂಗಿ, ಬಾಲಗೋಪಾಲ, ಮುಖ್ಯ ಸ್ತ್ರೀವೇಷ, ಪೀಠಿಕೆ ವೇಷ ಹೀಗೆ ಹಾಲವಾರು ಪಾತ್ರಗಳನ್ನು ಮಾಡಿದ್ಧಾರೆ. ಭೀಮ ಭಟ್ಟರ ತಂದೆ ಕೇಚಣ್ಣ ಭಟ್ಟರು ಕೂಡ ಯಕ್ಷಗಾನ ವೇಷಧಾರಿಯಾಗಿದ್ದರು.


ಮುಲಿಯಾಲ ಭೀಮ್ ಭಟ್ಟರು ದೇವಿ ಮಹಾತ್ಮೆ ಪ್ರಸಂಗದ ದೀವಿಯ ಪಾತ್ರವಾನ್ನು ಒಲಿಸಿಕೊಂಡವರು ಮತ್ತು ದೇವಿ ಭಟ್ರು ಎಂದೇ ಪ್ರಸಿದ್ಧರು. ಪ್ರಮೀಳೆ, ಶಶಿಪ್ರಭೆ, ಮೀನಾಕ್ಷಿ ಯಂತಹ ಸ್ತ್ರೀಪಾತ್ರಗಳು ಅಲ್ಲದೆ ಪುರುಷ ಪಾತ್ರಗಳಾದ ಅತಿಕಾಯ, ತಾಮ್ರಧ್ವಜ, ಕರ್ಣ, ದ್ರುಪದ, ಕೃಷ್ಣ ಮುಂತಾದ ಬಹುತೇಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಇವರ ಅಂತ್ಯಕ್ರಿಯೆ ಕಾಂತಾವರ ಕ್ಷೇತ್ರದ ಧರ್ಮದರ್ಶಿ ಡಾ. ಜೀವಂಧರ ಬಳ್ಳಾಲ ರ ಉಪಸ್ಥಿತಿಯಲ್ಲಿ ಬೆಳುವಾಯಿಯ ಸ್ಮಶಾನದಲ್ಲಿ ನಡೆಸಲಾಗುತ್ತಿದೆ. ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!