Thursday, June 4, 2026
Homeತಾಜಾ ಸುದ್ದಿಎಲೆ ಅಡಿಕೆ ಗಂಟಲಿನಲ್ಲಿ ಸಿಕ್ಕಿಕೊಂಡು ವ್ಯಕ್ತಿ ಸಾವು

ಎಲೆ ಅಡಿಕೆ ಗಂಟಲಿನಲ್ಲಿ ಸಿಕ್ಕಿಕೊಂಡು ವ್ಯಕ್ತಿ ಸಾವು

- Advertisement -
- Advertisement -

ಮಹಾರಾಷ್ಟ್ರ: ಎಲೆ ಅಡಿಕೆ ಗಂಟಲಿನಲ್ಲಿ ಸಿಕ್ಕಿಕೊಂಡು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ.

ಇಲ್ಲಿನ ರೈಲ್ವೆ ನಿಲ್ದಾಣದ ನಿವಾಸಿ ಗಣೇಶ್ ಜಗನ್ನಾಥದಾಸ್ ವಾಘ್ (37) ಎಂಬುವರು ಡಿಶ್ ಟಿವಿ ಅಳವಡಿಸಲು ಸಾಹುಜಿ ಎಂಬವರ ಮನೆಗೆ ತೆರಳಿದ್ದರು. ಅಲ್ಲಿಗೆ ಹೋಗುವ ಮುನ್ನ ಎಲೆ ಅಡಿಕೆ ತಿಂದುಕೊಂಡು ಹೋಗಿದ್ದರು.

ಅಲ್ಲಿ ಕೆಲಸ ಮಾಡುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಸಾಹುಜಿಯ ಕುಟುಂಬಸ್ಥರು ಇತರರ ಸಹಾಯದಿಂದ ಗಣೇಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!