- Advertisement -
- Advertisement -
ಬಂಟ್ವಾಳ: ನೇಣು ಬಿಗಿದುಕೊಂಡು ಕೂಲಿ ಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಿಕಲ್ಲು ಗ್ರಾಮದ ಕೊಳಕಿಲೋಡಿಯಲ್ಲಿ ನಡೆದಿದೆ. ಕೊಳಕಿಲೋಡಿ ನಿವಾಸಿ ಕೂಲಿ ಕಾರ್ಮಿಕ ಹೊನ್ನಪ್ಪ ಗೌಡ (64) ಮೃತ ದುರ್ದೈವಿ.
ಹೊನ್ನಪ್ಪ ಗೌಡ ಅವರು ವಿಪರೀತ ಕುಡಿತದ ಚಟ ಹೊಂದಿದ್ದು, ಇತ್ತೀಚೆಗೆ ಸರಿಯಾಗಿ ಕೆಲಸಕ್ಕೂ ಹೋಗದೆ ಮನೆಯಲ್ಲಿರುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಹಣ ಸಾಲದೇ ಜೀವನದಲ್ಲಿ ಜುಗುಪ್ಸೆಗೊಂಡು ಮನೆಯ ಸಮೀಪದಲ್ಲಿ ಮರವೊಂದಕ್ಕೆ ಲುಂಗಿ ಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರ ಪುತ್ರ ಮನೋಜ್ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -