Saturday, June 6, 2026
Homeಕರಾವಳಿಉಡುಪಿಕಾರ್ಕಳ: ಸಂಬಳ ಕೊಡದೇ ಅವಮಾನ ಮಾಡಿದ್ದಾರೆ ಎಂದು ಮನನೊಂದು ವ್ಯಕ್ತಿ ಆತ್ಮಹತ್ಯೆ

ಕಾರ್ಕಳ: ಸಂಬಳ ಕೊಡದೇ ಅವಮಾನ ಮಾಡಿದ್ದಾರೆ ಎಂದು ಮನನೊಂದು ವ್ಯಕ್ತಿ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಸಂಬಳ ಕೊಡದೇ ಅವಮಾನ ಮಾಡಿದ್ದಾರೆ ಎಂದು ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದಲ್ಲಿ ನಡೆದಿದೆ. ಮುಂಡ್ಕೂರು ನಿವಾಸಿ ರಮೇಶ್  ಮೃತ ವ್ಯಕ್ತಿ.

 “ನನ್ನ ತಂದೆ ರಮೇಶ್ ಅವರು ನ್ಯೂ ಸಾಯಿ ಕೃಪಾ ಹೊಟೇಲ್‌ ನಲ್ಲಿ ಕೆಲಸ ಮಾಡುತ್ತಿದ್ದರು. ಅದರ ಮಾಲೀಕ ಸುರೇಶ್ ತಂದೆಯನ್ನು ದುಡಿಸಿ ಸಂಬಳ ಕೊಡದೆ, ಅವಮಾನ ಮಾಡಿದ್ದಾರೆ . ತಂದೆಯ ಕಾಲರ್‌ ಹಿಡಿದು ಕೆನ್ನೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಂದೆಯ ಸಾವಿಗೆ ಸುರೇಶ್ ಅವರೇ ನೇರ ಕಾರಣ” ಎಂದು ರಮೇಶ್ ಅವರ ಮಗ ಶರತ್ ಅವರು ಪೊಲೀಸರು ದೂರು ನೀಡಿದ್ದಾರೆ. ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!