Sunday, June 14, 2026
Homeಕರಾವಳಿಕಡಬ;ಕಾಣಿಯೂರಿನಲ್ಲಿ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ     

ಕಡಬ;ಕಾಣಿಯೂರಿನಲ್ಲಿ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ     

- Advertisement -
- Advertisement -

ಕಡಬ; ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಣಿಯೂರಿನಲ್ಲಿ ನಡೆದಿದೆ.ಕಾಣಿಯೂರು ಸಮೀಪದ ಚಾರ್ವಾಕ ಗ್ರಾಮದ ಆತಾಜೆ ಮೇದಪ್ಪ ಗೌಡ (48 )ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮೇದಪ್ಪ ಗೌಡ ಅವರು ತಮ್ಮ ಅಣ್ಣನ ಪತ್ನಿ ಹಾಗೂ ಮಗಳೊಂದಿಗೆ ವಾಸವಾಗಿದ್ದರು.ಜ 17ರಂದು ರಂದು ಬೆಳಗ್ಗೆ ಮೇದಪ್ಪ ಗೌಡರ ಅಣ್ಣನ ಪತ್ನಿ ಕಾನಕಜೆ ಹೂ ಹೆಕ್ಕಲು ಹೋಗಿದ್ದು ಹೂ ಹೆಕ್ಕಿಕೊಂಡು ಮನೆಗೆ ಬಂದಾಗ ಮನೆಯಲ್ಲಿ ಮೇದಪ್ಪ ಗೌಡರು ಇಲ್ಲದೇ ಇದ್ದು ನಂತರ ಮೇದಪ್ಪ ಗೌಡರವರ ಮೊಬೈಲ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಲಿಲ್ಲ.

ಬಳಿಕ ಮನೆಯ ಸುತ್ತಮುತ್ತ ಹುಡುಕಾಡಿದಾಗ ಮೇದಪ್ಪ ಗೌಡರು ಮನೆಯ ಹತ್ತಿರ ಸುಮಾರು 50 ಮೀಟರ್ ದೂರದಲ್ಲಿರುವ ತೋಟದಲ್ಲಿ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!