Thursday, June 4, 2026
Homeಕರಾವಳಿಉಡುಪಿಒಂದೇ ವಾರದ ಅಂತರದಲ್ಲಿ ಉಡುಪಿಯಲ್ಲಿ ಎರಡು: ದುರಂತ ದೇವಸ್ಥಾನದಲ್ಲಿಯೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಒಂದೇ ವಾರದ ಅಂತರದಲ್ಲಿ ಉಡುಪಿಯಲ್ಲಿ ಎರಡು: ದುರಂತ ದೇವಸ್ಥಾನದಲ್ಲಿಯೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

- Advertisement -
- Advertisement -

ಉಡುಪಿ:  ಎರಡು ದಿನಗಳ ಹಿಂದೆ ಉಡುಪಿಯಲ್ಲಿ ವ್ಯಕ್ತಿಯೊಬ್ಬ ದೇಗುಲದ ಆವರಣದಲ್ಲೇ ಆತ್ಮಹತ್ಯೆ ಶರಣಾದ ಘಟನೆ ನಡೆದಿತ್ತು. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ.

ಉಡುಪಿ ಕೋಟತಟ್ಟು ಪಡುಕರೆಯ ಶಿರಸಿ ಮಾರಿಕಾಂಬ ದೇಗುಲದ ಸಮೀಪದ ಬಾವಿಯ ಹಗ್ಗದಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚೆನ್ನಯ್ಯ ಪೂಜಾರಿ (51) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಇವರು ಕೋಟ ಗ್ರಾಮಪಂಚಾಯತ್ ವ್ಯಾಪ್ತಿಯ ಪಡುಕರೆಯ ಸಮುದ್ರ ಕಿನಾರೆಯಲ್ಲಿ ಬೀಡಾ ಅಂಗಡಿ ಇರಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಇನ್ನು

ಒಂದೇ ವಾರದಲ್ಲಿ ಎರಡು ಪ್ರಕರಣ ಕೋಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎರಡು ದಿನಗಳ ಹಿಂದೆ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಳದಲ್ಲಿ ಚಂದ್ರ ಪೂಜಾರಿ ಎಂಬಾತ ಆತ್ಮಹತ್ಯೆ ಮಾಡಿ ಕೊಂಡಿದ್ದ. ಪಡುಕರೆ ಘಟನೆ ಎರಡನೆಯದ್ದಾಗಿದೆ. ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು ದೇವಳದ ಶ್ರದ್ಧಾ ಭಕ್ತಿಗೆ ಕುಂದುತರುವ ಪ್ರಕರಣವಾಗಿದೆ . ಎಂಬ ಮಾತುಗಳು ಕೇಳಿಬರುತ್ತಿವೆ

- Advertisement -

Latest News

error: Content is protected !!