Thursday, July 16, 2026
Homeತಾಜಾ ಸುದ್ದಿಪಾರ್ಕ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಶಿಕ್ಷಕಿ

ಪಾರ್ಕ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ: ನೆರವಿಗೆ ಧಾವಿಸಿ ಮಾನವೀಯತೆ ಮೆರೆದ ಶಿಕ್ಷಕಿ

- Advertisement -
- Advertisement -

ಮೈಸೂರು: ಹಾಡಿಯ ಮಹಿಳೆಯೊಬ್ಬರು ಪಾರ್ಕ್ ನಲ್ಲಿ  ಮಗುವಿಗೆ ಜನ್ಮ ನೀಡಿರುವ ಘಟನೆ ಮೊಸೂರಿನಲ್ಲಿ  ನಡೆದಿದೆ.

ಕೊಡಗು ಮೂಲದ ಮಹಿಳೆ ನಗರದ ಪೀಪಲ್ಸ್‌ ಪಾರ್ಕ್‌ನ ಉದ್ಯಾನದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಯಾರೂ ಆಕೆಯ ನೆರವಿಗೆ ಬಾರದಿರುವಾಗ ಶಿಕ್ಷಕಿಯೊಬ್ಬರು ಆಕೆಗೆ ಸಹಾಯ ಮಾಡಿದ್ದಾರೆ.

ಪಾರ್ಕ್‌ನಲ್ಲಿದ್ದ ಮಹಿಳೆ ದಿಢೀರನೆ ಹೆರಿಗೆ ನೋವಿನಿಂದ ಚೀರಿದ್ದಾರೆ. ಆಗ ದೈಹಿಕ ಶಿಕ್ಷಕಿ ಶೋಭಾ ಅವರು ಆಕೆಯ ನೆರವಿಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿ ಚೇತರಿಸಿಕೊಳ್ಳುವವರೆಗೆ ಆಕೆಯ ಜೊತೆಗಿದ್ದು ಮಾನವೀಯತೆ ಮೆರೆದಿದ್ದಾರೆ.

- Advertisement -

Latest News

error: Content is protected !!