Saturday, June 27, 2026
Homeಕರಾವಳಿಬೆಳ್ತಂಗಡಿ : ಹೊಟೇಲಿನೊಳಗೆ ಜೀವನ ಅಂತ್ಯಗೊಳಿಸಿದ ಹೊಟೇಲ್ ನೌಕರ

ಬೆಳ್ತಂಗಡಿ : ಹೊಟೇಲಿನೊಳಗೆ ಜೀವನ ಅಂತ್ಯಗೊಳಿಸಿದ ಹೊಟೇಲ್ ನೌಕರ

- Advertisement -
- Advertisement -

ಬೆಳ್ತಂಗಡಿ : ಕೆಲಸ ಮಾಡುವ ಹೊಟೇಲಿನ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ  ಹೊಟೇಲ್ ಶ್ರೀ ಲಕ್ಷ್ಮೀ ಎಂಬ ಹೆಸರಿನ ಹೊಟೇಲಿನ ಅಡುಗೆ ಕೆಲಸ ಮಾಡುವ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ನಿವಾಸಿ ಜನಾರ್ಧನ್ ಶೆಟ್ಟಿಗಾರ್ (48) ಅಡುಗೆ ಕೋಣೆಯಲ್ಲಿ ಜ.22 ರಂದು ಸಂಜೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಗನ್ನಾಥ್ ಹೊಟೇಲ್ ನಲ್ಲಿ ರೂಂ ನಲ್ಲಿ ವಾಸವಾಗುತ್ತಿದ್ದು ಎರಡು ವಾರಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದರು. ಇಂದು ಭಾನುವಾರವಾಗಿದ್ದ ಕಾರಣ ಹೊಟೇಲ್ ಗೆ ರಜೆ ಇದ್ದು ಅಲ್ಲಿಯೇ ಉಳಿದುಕೊಂಡಿದ್ದರು. ಸಂಜೆ ವೇಳೆ ಮಾಲೀಕರು ಜನಾರ್ಧನ್ ಶೆಟ್ಟಿಗಾರ್ ಗೆ ಕರೆ ಮಾಡಿ ಸೋಮವಾರಕ್ಕೆ ಬೇಕಾಗುವ ಅಡುಗೆ ಸಾಮಾನು ತಂದಿಡಲು ಹೇಳಿದ್ದರು. ಅದರಂತೆ ಸಾಮಾನು ತಂದು ನಂತರ ಏಕಾಏಕಿ ಆತ್ಮಹತ್ಯೆ ಗೆ ಶರಣಾಗಿದ್ದಾರೆ. ಜನಾರ್ಧನ್ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!