Saturday, June 6, 2026
Homeಕರಾವಳಿಸುಳ್ಯ; ಅಕ್ರಮ ಮದ್ಯ ಹಾಗೂ ಗೋ ಸಾಗಾಟ ಮಾಡುತ್ತಿದ್ದ ಕಾರು ಪಲ್ಟಿ, ಓರ್ವ ಆರೋಪಿಯ ಬಂಧನ

ಸುಳ್ಯ; ಅಕ್ರಮ ಮದ್ಯ ಹಾಗೂ ಗೋ ಸಾಗಾಟ ಮಾಡುತ್ತಿದ್ದ ಕಾರು ಪಲ್ಟಿ, ಓರ್ವ ಆರೋಪಿಯ ಬಂಧನ

- Advertisement -
- Advertisement -

ಸುಳ್ಯ: ಅಕ್ರಮವಾಗಿ ಗೋ ಹಾಗೂ ಮದ್ಯ ಸಾಗಾಟ ಮಾಡುತ್ತಿದ್ದ ಕಾರೊಂದು ಪಲ್ಟಿಯಾಗಿ ಓರ್ವ ಆರೋಪಿ ಸಿಕ್ಕಿ ಬಿದ್ದ ಘಟನೆ ಸುಳ್ಯದಲ್ಲಿ ನಡೆದಿದೆ.

ಸುಳ್ಯ ಕಡೆಯಿಂದ ಕೇರಳದ ಬಂದಡ್ಕ ಕಡೆಗೆ ಕೋಲ್ಚಾರು ಮಾರ್ಗವಾಗಿ ಅಕ್ರಮ ದನ ಹಾಗೂ ಮದ್ಯದ ಬಾಟಲಿಗಳನ್ನು ಸಾಗಾಟ ಮಾಡುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಿತ್ತಡ್ಕ ರೋಟರಿ ಶಾಲೆಯ ಬಳಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.

ಈ ವೇಳೆ ಕಾರಿನಲ್ಲಿದ್ದ ಸುಳ್ಯದ ಅಸ್ಕರ್ ಎಂಬಾತ ಮಾತ್ರ ಸಿಕ್ಕಿ ಬಿದ್ದಿದ್ದು  ಮತ್ತೊಬ್ಬ ಆರೋಪಿ ಉಸ್ಮಾನ್ ಎಂಬಾತ ಪರಾರಿಯಾಗಿದ್ದಾನೆ. ಕಾರಿನಲ್ಲಿ ಎರಡು ದನಗಳನ್ನ ಸಾಗಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಈ ರಸ್ತೆ ಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಕಾರು ಪಲ್ಟಿಯಾದದನ್ನು ಗಮನಿಸಿದಾಗ ಅಕ್ರಮ ದನ ಸಾಗಾಟ ಬೆಳಕಿಗೆ ಬಂದಿದೆ. ಸ್ಥಳೀಯರು ತಕ್ಷಣ ಸುಳ್ಯ ಪೊಲಿಸರಿಗೆ ವಿಷಯ ತಿಳಿಸಿದ ಮೇರೆಗೆ ಎಸ್.ಐ.ದಿಲೀಪ್ ಹಾಗೂ ಪೊಲಿಸ್ ಸಿಬ್ಬಂದಿ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!