Monday, May 6, 2024
Homeತಾಜಾ ಸುದ್ದಿಯುಎಇ ರಾಜಮನೆತನದ ಅಧಿಕಾರಿ ಎಂದು ಹೇಳಿಕೊಂಡು ನವದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ಗೆ ಲಕ್ಷಾಂತರ ರೂಪಾಯಿ...

ಯುಎಇ ರಾಜಮನೆತನದ ಅಧಿಕಾರಿ ಎಂದು ಹೇಳಿಕೊಂಡು ನವದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ಗೆ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣ; ಪುತ್ತೂರಿನ ಆರೋಪಿಯನ್ನು ಬಂಧಿಸಿದ ಪೊಲೀಸರು

spot_img
- Advertisement -
- Advertisement -

ನವದೆಹಲಿ: ತಾನು ‘ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನ ರಾಜಮನೆತನದ ಅಧಿಕಾರಿ ಎಂದು ಹೇಳಿಕೊಂಡು ಲೀಲಾ ಪ್ಯಾಲೇಸ್‌ ಹೋಟೆಲ್‌ನಲ್ಲಿ ತಂಗಿ ₹23.46 ಲಕ್ಷ ಬಿಲ್‌ ಮೊತ್ತ ಪಾವತಿಸದೆ ಪರಾರಿಯಾಗಿದ್ದ ವ್ಯಕ್ತಿಯನ್ನು ಪುತ್ತೂರಿನ ದರ್ಬೆಯ ಆತನ ಮನೆಯಲ್ಲಿ ಬಂಧಿಸಲಾಗಿದೆ.

ಮಹಮ್ಮದ್‌ ಶರೀಫ್‌ ಬಂಧಿತ ಆರೋಪಿ. ಈತ ತಾನು ಯುಎಇ ಅಧ್ಯಕ್ಷ ಶೇಖ್‌ ಫಲಾಹ್‌ ಬಿನ್‌ ಜಾಯೇದ್‌ ಅಲ್ ನಹ್ಯಾನ್‌ ಅವರ ಕಚೇರಿಯ ಉನ್ನತ ಅಧಿಕಾರಿ ಎಂದು ಹೇಳಿಕೊಂಡಿದ್ದ. ಅಲ್ಲದೇ  ಕಳೆದ ವರ್ಷದ ಆಗಸ್ಟ್‌ 1ರಂದು ಕೊಠಡಿ ಪಡೆದಿದ್ದ. ಈ ವೇಳೆ ಹೋಟೆಲ್‌ ಸಿಬ್ಬಂದಿಗೆ ನಕಲಿ ಬ್ಯುಸಿನೆಸ್‌ ಕಾರ್ಡ್‌ ಹಾಗೂ ಯುಎಇ ನಿವಾಸಿ ಪ್ರಮಾಣ ಪತ್ರ ಒದಗಿಸಿದ್ದ ಎನ್ನಲಾಗಿದೆ.

ಆರೋಪಿಯು ನವೆಂಬರ್‌ 20ರವರೆಗೂ ಹೋಟೆಲ್‌ನ ಕೊಠಡಿ ಸಂಖ್ಯೆ 427ರಲ್ಲಿ ತಂಗಿದ್ದ. ಈತ ಸಿಲ್ವರ್‌ ಬಾಟಲ್‌ ಹೋಲ್ಡರ್‌ ಸೇರಿದಂತೆ ಕೊಠಡಿಯಲ್ಲಿದ್ದ ಕೆಲ ಬೆಲೆ ಬಾಳುವ ವಸ್ತುಗಳನ್ನೂ ಕಳವು ಮಾಡಿಕೊಂಡು ಹೋಗಿದ್ದಾನೆ ಎಂದಪ ಹೋಟೆಲ್‌ನ ಆಡಳಿತವು ದೂರು ನೀಡಿತ್ತು.

ಇನ್ನು ಹೋಟೆಲ್‌ನ ಒಳಗೆ ಹಾಗೂ ಹೊರಭಾಗದ ಆವರಣದಲ್ಲಿ ಅಳವಡಿಸಲಾಗಿದ್ದ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಆತನ ಪತ್ತೆಗೆ ಬೆಲೆ ಬೀಸಿದ ಪೊಲೀಸರು ಆತ ತನ್ನ ಪುತ್ತೂರಿನ ನಿವಾಸದಲ್ಲಿರುವ ಬಗ್ಗೆ ಮಾಹಿತಿ ಪಡೆದು ಆತನನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!