Thursday, June 4, 2026
Homeತಾಜಾ ಸುದ್ದಿಸಂಬಂಧಿಕರ ಮನೆಗೆಂದು ಬಂದ ವ್ಯಕ್ತಿ ನಾಪತ್ತೆ

ಸಂಬಂಧಿಕರ ಮನೆಗೆಂದು ಬಂದ ವ್ಯಕ್ತಿ ನಾಪತ್ತೆ

- Advertisement -
- Advertisement -

ಬೆಳ್ತಂಗಡಿ: ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆ ಬಾಗಿಲು ಎಂಬಲ್ಲಿಗೆ ಸಂಬಂಧಿಕರ ಮನೆಗೆ ಬಂದಿದ್ದ ಅಲದಂಗಡಿ ದೇರಂದೋಡಿ ನಿವಾಸಿ ಆನಂದ ಎಂಬವರು ಇದ್ದಕ್ಕಿದ್ದ ಹಾಗೆ ನಾಪತ್ತೆಯಾಗಿರುವ ಘಟನೆ ಎ.9 ರಂದು ಮುಂಜಾನೆ ನಡೆದಿದೆ.


ನಾಪತ್ತೆಯಾದ ವ್ಯಕ್ತಿ ಆನಂದ ಎಂಬವರು ಕೋಟೆಬಾಗಿಲಿನ ಚಂದ್ರಶೇಖರ್ ಎನ್ನುವವರ ಬಾವನಾಗಿದ್ದು, ಇವರ ಮನೆಗೆ 4 ದಿನಗಳ ಹಿಂದೆಯೇ ಬಂದಿದ್ದರು.ಎ.8ರಂದು ರಾತ್ರಿ ಮಲಗಿದ್ದ ಆನಂದ ಎಂಬವರು ಮುಂಜಾನೆ 5. 45 ರ ವೇಳೆ ನಾಪತ್ತೆಯಾಗಿದ್ದರು.


ಮನೆಯರು ಎಚ್ಚರ ಗೊಂಡಾಗ ಆನಂದ ರವರು ಕಾಣದೇ ಇದ್ದುದನ್ನ ಕಂಡು ಹುಡುಕಾಡಿದಾಗ ಮನೆಯವರಿಗೆ ಹತ್ತಿರದ ಮನೆಯ ಬಳಿ ಚಾಪೆ ಹಾಗೂ ಬಟ್ಟಿಟೆಬರೆಗಳು ಪತ್ತೆಯಾಗಿದೆ. ಕೊಕ್ಕಡದ ರಸ್ತೆ ಕಡೆ ಆ ವ್ಯಕ್ತಿ ಹೋಗಿರುವುದನ್ನು ಕಂಡ ಅಲ್ಲಿಯ ಸ್ಥಳೀಯರು ಚಂದ್ರಶೇಖರ್ ಮನೆಗೆ ಮಾಹಿತಿ ನೀಡಿದ್ದಾರೆ. ಆನಂದರವರು ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!