Wednesday, June 3, 2026
Homeತಾಜಾ ಸುದ್ದಿಆಂಬುಲೆನ್ಸ್ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

ಆಂಬುಲೆನ್ಸ್ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

- Advertisement -
- Advertisement -

ಬೆಳ್ತಂಗಡಿ: ಹೆರಿಗೆಗೆಂದು 108 ಅಂಬ್ಯುಲೆನ್ಸ್ ವಾಹನದಲ್ಲಿ ಮಂಗಳೂರಿಗೆ ಹೋಗುವ ವೇಳೆ ದಾರಿ ಮಧ್ಯೆ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.


ವೇಣೂರು ನಿವಾಸಿ ರಮೇಶ್ ಅವರ ಪತ್ನಿ ಗೌರಮ್ಮಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ.ಎರಡನೇ ಡೆಲಿವರಿಗೆಂದು ಬೆಳ್ತಂಗಡಿಯಿಂದ ಒಮ್ಮೆ ಕಾರಿನಲ್ಲಿ ಪುಂಜಾಲಕಟ್ಟೆವರೆಗೆ ಬಂದಿದ್ದರು. ಬಳಿಕ 108 ಅಂಬ್ಯುಲೆನ್ಸ್ ಮೂಲಕ ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಲು ಹೋಗುತ್ತಿದ್ದಂತೆ ದಾರಿ ಮಧ್ಯೆ ಕಣ್ಣೂರು ಎಂಬಲ್ಲಿ ನೋವು ಹೆಚ್ಚಾಗಿ ಹೆರಿಗೆಯಾಗಿದೆ.


ಜಿಲ್ಲಾ ಉಸ್ತುವಾರಿ ಉಮೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಹೆರಿಗೆ ಮಾಡಿಸಲಾಯಿತು. ತಾಯಿ ಮಗುವನ್ನು ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ಸೇರಿಸಲಾಗಿದ್ದು ತಾಯಿ ಮಗು ಆರೋಗ್ಯದಿಂದ ಇದ್ದಾರೆ. ಚಾಲಕ ಜಗನ್ನಾಥ ಶೆಟ್ಟಿ ಅವರು ಸಹಕಾರ ನೀಡಿದರು.

- Advertisement -

Latest News

error: Content is protected !!