Friday, July 17, 2026
Homeತಾಜಾ ಸುದ್ದಿಬಂಟ್ವಾಳ: ಸಿಡಿಲು ಬಡಿದು ಮನೆಗೆ ತೀವ್ರ ಹಾನಿ; ಇಬ್ಬರಿಗೆ ಗಾಯ

ಬಂಟ್ವಾಳ: ಸಿಡಿಲು ಬಡಿದು ಮನೆಗೆ ತೀವ್ರ ಹಾನಿ; ಇಬ್ಬರಿಗೆ ಗಾಯ

- Advertisement -
- Advertisement -

ಬಂಟ್ವಾಳ: ಸಿಡಿಲು ಬಡಿದು ಮನೆಗೆ ತೀವ್ರ ಹಾನಿಯಾಗಿ ಮನೆಯೊಳಗಿದ್ದ ಇಬ್ಬರಿಗೆ ಗಾಯವಾದ ಘಟನೆ ಬಂಟ್ವಾಳ ತಾಲೂಕಿನ ಪೆರಾಜೆಯಲ್ಲಿ ನಡೆದಿದೆ.


ಪೆರಾಜೆ ಗ್ರಾಮದ ಸಾದಿಕುಕ್ಕು ನಿವಾಸಿ ದಿ.ಮೋನಪ್ಪ ನಾಯ್ಕ ಅವರ ಪತ್ನಿ,ಗೀತಾ ಮೋನಪ್ಪ ನಾಯ್ಕ ಅವರ ಮನೆಗೆ ಸಿಡಲು ಬಡಿದ ಪರಿಣಾಮ ಮನೆಗೆ ತೀವ್ರ ಹಾನಿಯಾಗಿದ್ದಲ್ಲದೆ, ಮನೆಯಲ್ಲಿ ಇದ್ದ ಗೀತಾ ಅವರ ಮಕ್ಕಳಾದ ಜೀವನ್ ಮತ್ತು ಸಚಿನ್ ಅವರಿಗೆ ಗಾಯವಾಗಿದೆ.

ಮನೆಯ ಹತ್ತಿರ ವಿದ್ದ ಅಕೇಶಿಯ ಮರ ಸಂಪೂರ್ಣ ಭಸ್ಮ ವಾಗಿದೆ.ಜೀವನ್ ಅವರ ಮುಖಕ್ಕೆ ಗಾಯವಾದರೆ ಸಚಿನ್ ಅವರಿಗೆ ಸಿಡಿಲು ಶಾಕ್ ಆಗಿದೆ ಎಂದು ಮನೆಯವರು ತಿಳಿಸಿದ್ದಾರೆ.ಮನೆಯ ವಿದ್ಯುತ್ ಪೂರೈಕೆ ಮಾಡುವ ತಂತಿಗಳು ಸಿಡಿಲಿನ ತೀವ್ರತೆ ಗೆ ಭಸ್ಮವಾಗಿ ಹೋಗಿದೆ.
ಘಟನೆಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಪೆರಾಜೆ ಪಿಡಿಒ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

Latest News

error: Content is protected !!