Thursday, June 4, 2026
Homeತಾಜಾ ಸುದ್ದಿನೂಪುರ್ ಶರ್ಮಾ ಬೆಂಬಲಿಸಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಕ್ಕೆ ಶಿರಚ್ಛೇದನ: ರಾಜಸ್ಥಾನದ ಉದಯಪುರದಲ್ಲಿ ಅಂಗಡಿಯಲ್ಲೇ ಟೈಲರ್...

ನೂಪುರ್ ಶರ್ಮಾ ಬೆಂಬಲಿಸಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಕ್ಕೆ ಶಿರಚ್ಛೇದನ: ರಾಜಸ್ಥಾನದ ಉದಯಪುರದಲ್ಲಿ ಅಂಗಡಿಯಲ್ಲೇ ಟೈಲರ್ ಕೊಲೆ

- Advertisement -
- Advertisement -

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಬಿಜೆಪಿ ಮಾಜಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಕ್ಕೆ ಶಿರಚ್ಛೇದನ ಮಾಡಲಾಗಿದೆ. ನೂಪುರ್ ಶರ್ಮಾ ಬೆಂಬಲಿಸಿದ್ದ ಟೈಲರ್ ಕನ್ನಯ್ಯಾ ಲಾಲ್ ಎಂಬಾತನನ್ನು ಶಿರಚ್ಛೇದನ ಮಾಡಲಾಗಿದೆ.

ಉದಯಪುರ ನಗರದ ಮಾಲ್ದಾಸ್ ಸ್ಟ್ರೀಟ್ ಪ್ರದೇಶದಲ್ಲಿ ಅಂಗಡಿಗೆ ನುಗ್ಗಿ ಕೃತ್ಯ ಎಸಗಲಾಗಿದೆ. ಶಿರಚ್ಛೇದನದ ಬಳಿಕ ದುಷ್ಕರ್ಮಿಗಳಿಂದ ವೀಡಿಯೋ ಬಿಡುಗಡೆ ಮಾಡಲ್ಪಟ್ಟಿದ್ದು, ಶಿರಚ್ಛೇದನ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ಹೇಳಿಕೊಂಡಿದ್ದಾರೆ.

ಅಲ್ಲದೇ ಈ ದುಷ್ಕರ್ಮಿಗಳು ಪ್ರಧಾನಿ ನರೇಂದ್ರಮೋದಿ ಹತ್ಯೆ ಮಾಡುವುದಾಗಿಯೂ ವೀಡಿಯೋದಲ್ಲಿ ಬೆದರಿಕೆ ಹಾಕಿದ್ದಾರೆ. ಟೈಲರ್ ಅಂಗಡಿ ನಡೆಸ್ತಿದ್ದ 40 ವರ್ಷದ ಕನ್ಹಯ್ಯಾ ಲಾಲ್ ಇತ್ತೀಚೆಗೆ ನೂಪುರ್ ಶರ್ಮಾ ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದರು.

- Advertisement -

Latest News

error: Content is protected !!