Wednesday, June 24, 2026
Homeಕರಾವಳಿಕೊರಗಜ್ಜನ ದೈವಸ್ಥಾನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಬಂಧನ

ಕೊರಗಜ್ಜನ ದೈವಸ್ಥಾನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ಬಂಧನ

- Advertisement -
- Advertisement -

ಮಂಗಳೂರು ಇಲ್ಲಿನ ಶಿವನಗರದಲ್ಲಿರುವ ಕೊರಗಜ್ಜನ ದೈವಸ್ಥಾನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಚಿಕ್ಕ ಡಂಡರಗಲ್ ಗ್ರಾಮದ ಹನುಮಂತ ಎನ್. ತಟ್ಟಿ (25) ಬಂಧಿತ ಆರೋಪಿ. ಪಾಂಡೇಶ್ವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಎಸ್ಸೈ ಅನಂತ ಮುರುಡೇಶ್ವರ್ ಅವರು ಸಿಬ್ಬಂದಿ ಪ್ರಕಾಶ್ ನಾಯ್ಕ್ ವಿ. ರೊಂದಿಗೆ ಗಸ್ತಿನಲ್ಲಿದ್ದ ವೇಳೆ ಹನುಮಂತ ತಟ್ಟಿ ಸಂಶಯಾಸ್ಪದ ರೀತಿಯಲ್ಲಿ ವರ್ತಿಸಿದ್ದ. ಪೊಲೀಸರು ವಿಚಾರಿಸಿದಾಗ ಆತ ಉತ್ತರಿಸಲು ತಡಬಡಾಯಿಸಿದ್ದಾನೆ. ಈ ಹಿನ್ನೆಲೆ ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!