Sunday, June 7, 2026
Homeತಾಜಾ ಸುದ್ದಿನೀರಿಗೆ ಬಿದ್ದ ಯುವತಿಯನ್ನು ರಕ್ಷಿಸಲು ಹೋಗಿ ಯುವಕ, ಯುವತಿ ಇಬ್ಬರೂ ನೀರುಪಾಲು

ನೀರಿಗೆ ಬಿದ್ದ ಯುವತಿಯನ್ನು ರಕ್ಷಿಸಲು ಹೋಗಿ ಯುವಕ, ಯುವತಿ ಇಬ್ಬರೂ ನೀರುಪಾಲು

- Advertisement -
- Advertisement -

ಮಡಿಕೇರಿ: ಫಾಲ್ಸ್ ಬಳಿ ಆಯತಪ್ಪಿ ನೀರಿಗೆ ಬಿದ್ದ ಯುವತಿಯನ್ನು ರಕ್ಷಿಸಲು ಹೋಗಿ ಯುವತಿ ಮತ್ತು ಯುವಕ ಇಬ್ಬರು ನೀರುಪಾಲಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಲ್ಲಳ್ಳಿ ಫಾಲ್ಸ್ ಬಳಿ ನಡೆದಿದೆ.

ಮಾರುತಿ ಕಾರಿನಲ್ಲಿ 6 ಮಂದಿ ಜಲಪಾತ ವೀಕ್ಷಣೆಗೆ ಬಂದಿದ್ದರು. ಅದರಲ್ಲಿ ಸುಂಟಿಕೊಪ್ಪದ ರಾಮನ್ ಅವರ ಪುತ್ರ, ಬೆಂಗಳೂರಿನ ಇನ್ಫೊಸಿಸ್‌ ಉದ್ಯೋಗಿ ಶಶಿಕುಮಾರ್ (32) ಹಾಗೂ ರಾಮನ್ ಅವರ ಮೊಮ್ಮಗಳು, ಕುಶಾಲನಗರದ ಅಂತಿಮ ಪದವಿ ವಿದ್ಯಾರ್ಥಿನಿ ದಿವ್ಯಾ (20) ಮೃತಪಟ್ಟವರು.

ಜಲಪಾತದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ದಿವ್ಯಾ ಆಯತಪ್ಪಿ ಬಿದ್ದಿದ್ದಾರೆ. ನೀರಿನಲ್ಲಿ ಬೀಳುತ್ತಿದ್ದ ದಿವ್ಯಾಳನ್ನು ರಕ್ಷಿಸಲು ತೆರಳಿದ ಶಶಿಕುಮಾರ್ ಸಹ ಕೂಡ ಬ್ಯಾಲೆನ್ಸ್ ಇಲ್ಲದೆ ಕೆಳಗಡೆ ಬಿದ್ದು ಮೃತ ಪಟ್ಟಿದ್ದಾರೆ. ಸೋಮವಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!