Friday, June 5, 2026
Homeತಾಜಾ ಸುದ್ದಿ'ನಿರ್ಮಾಪಕ ರಾಮು ಮೃತಪಟ್ಟದ್ದು ಕೊರೋನಾ ಸೋಂಕಿನಿಂದಲ್ಲ' ಆಸ್ಪತ್ರೆಯ ಮೂಲಗಳು ಹೇಳುವುದೇ ಬೇರೆ..!

‘ನಿರ್ಮಾಪಕ ರಾಮು ಮೃತಪಟ್ಟದ್ದು ಕೊರೋನಾ ಸೋಂಕಿನಿಂದಲ್ಲ’ ಆಸ್ಪತ್ರೆಯ ಮೂಲಗಳು ಹೇಳುವುದೇ ಬೇರೆ..!

- Advertisement -
- Advertisement -

ಬೆಂಗಳೂರು: ನಟಿ ಮಾಲಾಶ್ರಿಯವರ ಪತಿ ಹಾಗೂ ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ರಾಮು ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ರಾಮು ಅವರು ಕಿಲ್ಲರ್ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು ಎಂದು ವರದಿಯಾಗಿತ್ತು. ಆದರೆ ಅವರ ಸಾವಿಗೆ ಕಾರಣ ಬೇರೆ ಇತ್ತು ಎಂಬ ಮಾಹಿತಿ ಆಸ್ಪತ್ರೆಯ ಮೂಲಗಳಿಂದ ಲಭ್ಯವಾಗಿದೆ.

ರಾಮು ಮೃತಪಟ್ಟದ್ದು ಕೋವಿಡ್​ನಿಂದಲ್ಲ, ಫುಡ್​ ಪಾಯಿಸನ್​ನಿಂದ ಎನ್ನಲಾಗಿದೆ. ರಾಮು ಅವರ ಅಂತ್ಯಕ್ರಿಯೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ಇಂದು ನೆರವೇರಲಿದೆ. ಬೆಂಗಳೂರಿನಿಂದ ಹುಟ್ಟೂರಿನತ್ತ ರಾಮು ಪಾರ್ಥೀವ ಶರೀರವನ್ನು ತೆಗೆದುಕೊಂಡು ಹೋಗಲಾಗಿದ್ದು, ಮಾಲಾಶ್ರೀ ಹಾಗೂ ಅವರ ಕುಟುಂಬದ ಕೆಲವರು ಮಾತ್ರ ಜತೆಯಲ್ಲಿದ್ದಾರೆ.

ಒಂದು ವಾರದ ಹಿಂದೆ ಕೋಟಿ ರಾಮು ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಎಂ.ಎಸ್​.ರಾಮಯ್ಯ ಆಸ್ಪತ್ರೆಯಲ್ಲಿದಾಖಲಾಗಿದ್ದರು. ಆದರೆ ನಿನ್ನೆ ಫುಡ್​ ಪಾಯಿಸನ್​ನಿಂದ ಮೃತಪಟ್ಟಿದ್ದಾರೆ. ಆರಂಭದಲ್ಲಿ ಕರೊನಾ ಸೋಂಕಿನಿಂದಲೇ ರಾಮು ನಿಧನರಾಗಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

- Advertisement -

Latest News

error: Content is protected !!