Friday, May 3, 2024
Homeತಾಜಾ ಸುದ್ದಿಅಯ್ಯೋ ಎಂಥಾ ಕಾಲ ಬಂತಪ್ಪಾ: ಅಂಬ್ಯುಲೆನ್ಸ್ ಸಿಗದೇ ಬೈಕನಲ್ಲೇ ತಾಯಿಯ ಶವ ಸಾಗಿಸಿದ ಮಗ

ಅಯ್ಯೋ ಎಂಥಾ ಕಾಲ ಬಂತಪ್ಪಾ: ಅಂಬ್ಯುಲೆನ್ಸ್ ಸಿಗದೇ ಬೈಕನಲ್ಲೇ ತಾಯಿಯ ಶವ ಸಾಗಿಸಿದ ಮಗ

spot_img
- Advertisement -
- Advertisement -

ಆಂಧ್ರ ಪ್ರದೇಶ : ಕೋವಿಡ್ ಎರಡನೇ ಅಲೆ ಮತ್ತೊಂದು ಬಾರಿ ಕರುಣಾಜನಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ದೇಶದಲ್ಲಿ ಮಹಾಮಾರಿ ಸೋಂಕು ರಣಕೇಕೆ ಹಾಕುತ್ತಿದ್ದರೆ, ಬಡಜನರು ಅಸಹಾಯಕತೆಯ ನೋಟ ಬೀರುತ್ತ ಜೀವನ ಸಾಗಿಸುತ್ತಿದ್ದಾರೆ. ಇದೀಗ ಆಂಧ್ರ ಪ್ರದೇಶದಲ್ಲಿ ಆಯಂಬುಲೆನ್ಸ್ ಸಿಗದಿದ್ದರಿಂದ ಕೋವಿಡ್ ರೋಗಿಯ ಶವವನ್ನು ಬೈಕ್‍ ಮೇಲೆ ಸಾಗಿಸಿರುವ ಮನಕಲಕುವಂತಹ ಘಟನೆ ನಡೆದಿದೆ.

ಆಂಧ್ರದ ಶ್ರೀಕಾಕುಲಂ ಜಿಲ್ಲೆಯ ಮಂದಾಸ್ ಮಂಡಲ್ ಎಂಬ ಗ್ರಾಮ ಈ ಘಟನೆಗೆ ಸಾಕ್ಷಿಯಾಗಿದೆ. ಈ ಗ್ರಾಮದ 50 ವರ್ಷದ ಮಹಿಳೆಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು,ವರದಿ ಇನ್ನಷ್ಟೆ ಬರಬೇಕಿತ್ತು. ಸೋಮವಾರ ಆಕೆಯ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡಿದ್ದರಿಂದ ಶ್ರೀಕಾಕುಲಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಆರೋಗ್ಯ ಸ್ಥಿತಿ ತುಂಬಾ ಬಿಗಡಾಯಿಸಿದ್ದರಿಂದ ಆಸ್ಪತ್ರೆಯಲ್ಲೇ ಕಣ್ಣು ಮುಚ್ಚಿದ್ದಾರೆ.

ಕೋವಿಡ್‍ನಿಂದ ಮೃತಳಾದ ಆಕೆಯ ಶವ ಸಾಗಿಸಲು ಆಯಂಬುಲೆನ್ಸ್ ದೊರೆತಿಲ್ಲ. ಎಷ್ಟೇ ಸಮಯ ಕಾದರು ಕೂಡ ಆಯಂಬುಲೆನ್ಸ್ ಬಾರದೇ ಇದ್ದಾಗ ಶವವನ್ನು ತೆಗೆದುಕೊಂಡು ಹೋಗುವಂತೆ ಆಸ್ಪತ್ರೆಯ ಸಿಬ್ಬಂದಿ ಒತ್ತಡ ಹೇರಿದ್ದಾರೆ. ಇದರಿಂದ ದಾರಿ ತೋಚದ ಮೃತಳ ಮಗ ಹಾಗೂ ಅಳಿಯ, ಶವವನ್ನು ಬೈಕ್‍ ಮೇಲೆ ತಮ್ಮೂರಿಗೆ ಸಾಗಿಸಿ, ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

- Advertisement -
spot_img

Latest News

error: Content is protected !!