Thursday, May 2, 2024
Homeತಾಜಾ ಸುದ್ದಿಫೇಸ್ಬುಕ್ ಗೆಳತಿಯ ಭೇಟಿಗೆ ಹೋಗಿ ಗಡಿ ಭದ್ರತಾ ಪಡೆ ಕೈಗೆ ಸಿಕ್ಕಿಬಿದ್ದ ಭೂಪ..

ಫೇಸ್ಬುಕ್ ಗೆಳತಿಯ ಭೇಟಿಗೆ ಹೋಗಿ ಗಡಿ ಭದ್ರತಾ ಪಡೆ ಕೈಗೆ ಸಿಕ್ಕಿಬಿದ್ದ ಭೂಪ..

spot_img
- Advertisement -
- Advertisement -

ಮಹಾರಾಷ್ಟ್ರ : ಪ್ರೀತಿ ಮಾಯೆ ಹುಷಾರು ಅನ್ನೋ ಮಾತಿದೆ. ಹುಚ್ಚು ಪ್ರೀತಿ ಕೆಲವೊಮ್ಮೆ ಎಂಥೆಂತಾ ಹುಚ್ಚು ಸಾಹಸಗಳನ್ನೆಲ್ಲಾ ಮಾಡಿಸಿ ಮನುಷ್ಯನನ್ನು ಎಂತಹ ಅಪಾಯ ತಳ್ಳುತ್ತೆ ಎಂಬುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲೂ ಇವತ್ತು ಫೇಸ್ ಬುಕ್ , ಇನ್ಸ್ಟಾಗ್ರಾಮ್ ಮೂಲಕ ಹುಚ್ಚಿಕೊಳ್ಳುವ ಪ್ರೀತಿ ಇಲ್ಲಿಗೆ ತಲುಪುತ್ತೆ ಅಂತಾ ಊಹೆ ಮಾಡಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಹೀಗೆ ಫೇಸ್ ಬುಕ್ ಪ್ರೀತಿಯ ಹಿಂದಿ ಹೋದ ಭೂಪನೊಬ್ಬ ಇದೀಗ ಭಾರತೀಯ ಸೇನೆಯ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.

ಮಹಾರಾಷ್ಟ್ರದ ಉಸ್ಮಾನಾಬಾದ್ ನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಜೀಶಾನ್ ಎಂಬಾತನಿಗೆ ಫೇಸ್ಬುಕ್ನಲ್ಲಿ ಪಾಕಿಸ್ತಾನದ ಯುವತಿಯೊಂದಿಗೆ ಪರಿಚಯವಾಗಿದೆ. ಹೀಗಾಗಿ ಆಕೆಯನ್ನು ಭೇಟಿ ಮಾಡಲು ಮುಂದಾದ ಈತ ಬೈಕಿನಲ್ಲಿ ಗುಜರಾತಿಗೆ ಬಂದಿದ್ದು, ಕಚ್ ಮರಳುಗಾಡಿನಲ್ಲಿ ಆತನ ಬೈಕು ಸಿಲುಕಿಕೊಂಡಿದೆ.

ಬೈಕನ್ನು ಅಲ್ಲಿಯೇ ಬಿಟ್ಟ ಆತ ಕಾಲ್ನಡಿಗೆಯಲ್ಲೇ ಪಾಕಿಸ್ತಾನದ ಗಡಿ ಪ್ರವೇಶಿಸಲು ಮುಂದಾಗಿದ್ದಾನೆ. ಆದರೆ ಅನಾಥವಾಗಿ ಬಿದ್ದಿದ್ದ ಬೈಕ್ ನೋಡಿದ್ದ ಪೊಲೀಸರು ಗಡಿಯಲ್ಲಿನ ಎಲ್ಲ ಚೆಕ್ ಪೋಸ್ಟ್ ಗಳಿಗೆ ಎಚ್ಚರಿಕೆ ರವಾನಿಸಿದ್ದು, ಈ ವೇಳೆ ಗಡಿ ಭದ್ರತಾ ಪಡೆಯ ಕೈಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಆತನ ವಿಚಾರಣೆ ನಡೆಸಲಾಗುತ್ತಿದೆ.

- Advertisement -
spot_img

Latest News

error: Content is protected !!