Monday, June 8, 2026
Homeತಾಜಾ ಸುದ್ದಿವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ಪ್ರದರ್ಶಿಸಿದ ಕಿಡಿಗೇಡಿ: ರೋಸಿ ಹೋದ ಮಹಿಳೆಯಿಂದ...

ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ಪ್ರದರ್ಶಿಸಿದ ಕಿಡಿಗೇಡಿ: ರೋಸಿ ಹೋದ ಮಹಿಳೆಯಿಂದ…

- Advertisement -
- Advertisement -

ಔರಂಗಾಬಾದ್: ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ವಾಲುಜ್ ಗ್ರಾಮದಲ್ಲಿ ಮಹಿಳೆಗೆ ವಿಡಿಯೋ ಕರೆ ಮಾಡಿದ ಅಪರಿಚಿತ ವ್ಯಕ್ತಿ ಪತ್ನಿ ಎಂದು ಕರೆದು ಖಾಸಗಿ ಅಂಗ ತೋರಿಸಿದ್ದಾನೆ. ಅಲ್ಲದೇ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ್ದಾನೆ ಎಂದು ದೂರು ನೀಡಲಾಗಿದೆ.

ಮಹಿಳೆಯ ಪತಿ ಈ ಕುರಿತಾಗಿ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿಡಿಗೇಡಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ವಾಲುಜ್ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸತೀಶ್ ಪಂಡಿತ್ ನೀಡಿದ ಮಾಹಿತಿಯ ಪ್ರಕಾರ, ದೂರುದಾರನ ಪತ್ನಿಗೆ ಅಪರಿಚಿತ ಹಲವಾರು ಬಾರಿ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಅಶ್ಲೀಲ ವರ್ತನೆ ತೋರಿದ್ದಾನೆ. ವಿಡಿಯೋ ಕರೆ ಮಾಡಿ ಖಾಸಗಿ ಅಂಗ ಪ್ರದರ್ಶಿಸಿದ್ದು, ರೋಸಿಹೋದ ಮಹಿಳೆ ಗಂಡನಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ದುಷ್ಕರ್ಮಿ ಬಂಧನಕ್ಕೆ ಮಾಹಿತಿ ಕಲೆಹಾಕಲಾಗಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!