Tuesday, June 9, 2026
Homeತಾಜಾ ಸುದ್ದಿರಾಗಿಣಿ ಪರಪ್ಪನ ಅಗ್ರಹಾರಕ್ಕೆ ಹೊರಟಾಗ ಸ್ನೇಹಿತೆ ಸಂಜನಾಳಿಂದ ಕಣ್ಣೀರ ವಿದಾಯ....

ರಾಗಿಣಿ ಪರಪ್ಪನ ಅಗ್ರಹಾರಕ್ಕೆ ಹೊರಟಾಗ ಸ್ನೇಹಿತೆ ಸಂಜನಾಳಿಂದ ಕಣ್ಣೀರ ವಿದಾಯ….

- Advertisement -
- Advertisement -

ಬೆಂಗಳೂರು:ಕಳೆದ ಕೆಲವು ದಿನಗಳಿಂದ ಡ್ರಗ್ಸ್ ಮೊಕದ್ದಮೆಯಲ್ಲಿ ಬಂಧಿತರಾಗಿರುವ ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಮತ್ತು ರಾಗಿಣಿ ಈಗ ಬೇರೆಯಾಗುವ ಸಂದರ್ಭ ಬಂದಿದೆ. ಬಂಧನದ ನಂತರ ಹಳೆಯ ದ್ವೇಷ-ಮನಸ್ತಾಪ ಮರೆತು ಸ್ನೇಹಿತೆಯರಾಗಿದ್ದರು. ಇಷ್ಟು ದಿನಗಳ ಕಾಲ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಒಟ್ಟಿಗೇ ಇದ್ದ ನಟಿಮಣಿಯರು ಸೋಮವಾರ ಪರಸ್ಪರ ಅಗಲುವ ಸಮಯದಲ್ಲಿ ಕೊಂಚ ಮಂಕಾದರು.

ರಾಗಿಣಿಯನ್ನು ಜೈಲಿಗೆ ಸ್ಥಳಾಂತರಿಸುವ ಮೊದಲು ಆದೇಶದ ಪ್ರತಿಯನ್ನು ಪಡೆಯುವುದಕ್ಕೆ ಮತ್ತು ರಾಗಿಣಿ ತಮ್ಮ ಬಟ್ಟೆ-ಬರೆ ಪ್ಯಾಕ್ ಮಾಡಿಕೊಳ್ಳುವುದಕ್ಕೆ ಸಮಯ ಬೇಕಾಗಿದ್ದುದರಿಂದ ಪೊಲೀಸರು ಇಬ್ಬರನ್ನೂ ಮತ್ತೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆತಂದಾಗ ಇಬ್ಬರೂ ಅಗಲುವುದು ಖಚಿತವಾದ್ದರಿಂದ ಸಂಜನಾ ಮತ್ತು ರಾಗಿಣಿ ಪರಸ್ಪರ ತಬ್ಬಿಕೊಂಡು ದುಖ್ಹತಪ್ತರಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಸದ್ಯ ರಾಗಿಣಿಯನ್ನು ಜೈಲಿಗೆ ಕಳುಹಿಸಲಾಗಿದ್ದು, ಸಂಜನಾಳನ್ನು ಕಸ್ಟಡಿಗೆ ನೀಡಲಾಗಿದೆ. ಹೀಗಾಗಿ, ರಾಗಿಣಿ ಮತ್ತು ಸಂಜನಾ ಒಬ್ಬರನ್ನೊಬ್ಬರು ಬಿಟ್ಟುಹೋಗುವಾಗ ಬೇಸರ ವ್ಯಕ್ತಪಡಿಸ್ತಿದ್ದಾರೆ. ಸಂಜನಾ ಮತ್ತಷ್ಟು ದಿನಗಳ ಕಾಲ ಸಾಂತ್ವನ ಕೇಂದ್ರದಲ್ಲೇ ಇರಬೇಕಾಗುತ್ತದೆ. ದಿನದಿಂದ ದಿನಕ್ಕೆ ತನಿಖೆ ಬಲಗೊಳ್ಳುತ್ತಿದ್ದು ಮುಂದಿನ ನಡೆ ಕುರಿತು ಕುತೂಹಲ ಮೂಡುತ್ತಿದೆ.

- Advertisement -

Latest News

error: Content is protected !!