Wednesday, June 3, 2026
Homeಇತರರಾಜೀನಾಮೆ ನೀಡಲು ನಾನು ಸಿದ್ದನಿದ್ದೇನೆ: ಸಚಿವ ಮಾಧುಸ್ವಾಮಿ

ರಾಜೀನಾಮೆ ನೀಡಲು ನಾನು ಸಿದ್ದನಿದ್ದೇನೆ: ಸಚಿವ ಮಾಧುಸ್ವಾಮಿ

- Advertisement -
- Advertisement -

ಬೆಂಗಳೂರು: ಕೋಲಾರದಲ್ಲಿ ರೈತ ಮಹಿಳೆಯೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅವಾಚ್ಯ ಶಬ್ದ ಬಳಸಿದ್ದಕ್ಕಾಗಿ ಕ್ಷಮೆ ಕೇಳಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮುಖ್ಯಮಂತ್ರಿಯವರು ಹೇಳಿದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆರೆಗೆ ನೀರು ಹರಿಸುವ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಕೆರೆ ವೀಕ್ಷಣೆಗೆ ಹೋದ ಸಂದರ್ಭದಲ್ಲಿ ಮಹಿಳೆಯರ ಅಹವಾಲು ಸ್ವೀಕರಿಸಲು ವ್ಯವಸ್ಥೆ ಮಾಡಿದ್ದು, ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿಗಳು ಮಾಹಿತಿ ನೀಡುವ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದ್ದು. ಮಹಿಳೆ ನನ್ನ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ನಾನು ರಾಸ್ಕಲ್ ಬಾಯಿ ಮುಚ್ಚಿ ಎಂದು ಹೇಳಿದ್ದೆ. ನನ್ನ ವಿರುದ್ಧ ಕೂಗಾಟ ಮಾಡಿದ್ದರಿಂದ ಪದಬಳಕೆ ಮಾಡಿದ್ದೇನೆ. ಅದಕ್ಕಾಗಿ ಅವರಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮುಖ್ಯಮಂತ್ರಿಯವರಿಗೆ ಮಾಹಿತಿ ನೀಡುತ್ತೇನೆ. ಅವರು ರಾಜೀನಾಮೆ ನೀಡಿ ಎಂದರೆ ರಾಜೀನಾಮೆ ಕೊಡುತ್ತೇನೆ. ನನ್ನಿಂದ ಸರ್ಕಾರಕ್ಕೆ, ಪಕ್ಷಕ್ಕೆ ತೊಂದರೆಯಾಗಿದ್ದರೆ ರಾಜೀನಾಮೆ ಕೊಡುತ್ತೇನೆ. ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರಲು ಸಾಧ್ಯವೇ ಎಂದು ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

Latest News

error: Content is protected !!