- Advertisement -
- Advertisement -
ಭಾರೀ ಮೌಲ್ಯದ ಎಂಡಿಎಂ ಮಾದಕ ವಸ್ತುವನ್ನು ಬೆಂಗಳೂರಿನಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ ಇಬ್ಬರನ್ನು ಆದೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಮುಳಿಯಾರಿನ ನಿಜಾಮುದ್ದೀನ್(27) ಹಾಗು ಉದುಮ ಮಾಂಗಾಡ್ ನ ಮುನೀರ್ ಆಗಿದ್ದಾರೆ. ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಕಾರ್ಯಚರಣೆ ನಡೆದಿದ್ದು, ಆರೋಪಿಗಳ ಜೀಪನ್ನು ತಡೆದು ನಿಲ್ಲಿಸಿದಾಗ ಮಾದಕ ವಸ್ತುಗಳ ಪತ್ತೆಯಾಗಿದೆ.
ಆರೋಪಿಗಳು ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ತಂದಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರ ಕಾರ್ಯಾಚರಣೆಯು ಯಶಸ್ವಿಯಾಗಿದೆ.
- Advertisement -