Friday, May 3, 2024
Homeತಾಜಾ ಸುದ್ದಿನಾಳೆಯಿಂದ ಮೂರು ದಿನ ಮದ್ಯ ಪ್ರಿಯರಿಗೆ ಸಿಗಲ್ಲ ಹಾಟ್ ಡ್ರಿಂಕ್ಸ್

ನಾಳೆಯಿಂದ ಮೂರು ದಿನ ಮದ್ಯ ಪ್ರಿಯರಿಗೆ ಸಿಗಲ್ಲ ಹಾಟ್ ಡ್ರಿಂಕ್ಸ್

spot_img
- Advertisement -
- Advertisement -

ಬೆಂಗಳೂರು : ಸರ್ಕಾರದ ಇ- ಇಂಡೆಂಟ್ ಪದ್ದತಿಗೆ ಮದ್ಯದಂಗಡಿ ಮಾಲೀಕರು ವಿರೋಧಿಸಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮದ್ಯದಂಗಡಿ ಮಾಲೀಕರು ಮೂರು ದಿನ ಮದ್ಯ ಖರೀದಿಸದಿರಲು ನಿರ್ಧರಿಸಿದ್ದಾರೆ. ಸರ್ಕಾರದ ಇ-ಇಂಡೆಎಂಟ್ ವಿರುದ್ಧ ಮದ್ಯದಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಜಿಲ್ಲಾವಾರು ವಿಭಾಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಒಂದೊಂದು ದಿನ ಮದ್ಯ ಮಾರಾಟವನ್ನು ನಿಲ್ಲಿಸಲಾಗಿತ್ತು.

ಇದೀಗ ಬೆಂಗಳೂರಿನ ಸರದಿ ಬಂದಿದ್ದು, ಇನ್ನೂ 3 ದಿನಗಳ ಕಾಲ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಮದ್ಯಪಾನ ಖರೀದಿ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ನಾಳೆ ಹಾಗೂ ಬೆಂಗಳೂರು ನಗರದಲ್ಲಿ ಗುರುವಾರ ಮದ್ಯ ಖರೀದಿ ಮಾಡದಿರಲು ಮದ್ಯದಂಗಡಿ ಮಾಲೀಕರು ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೂರು ದಿನ ಬೆಂಗಳೂರಿನಲ್ಲಿ ಖರೀದಿಸಲು ಎಣ್ಣೆ ಸಿಗಲ್ಲ ಎನ್ನಲಾಗಿದೆ. ಸ್ಟಾಕ್ ಇಟ್ಟಿಕೊಂಡಿರೋ ಅಂಗಡಿಗಳು ಮದ್ಯ ಮಾರಾಟ ಮಾಡಲಿವೆ. ಮೂರು ದಿನಗಳ ಕಾಲ ಮದ್ಯ ಖರೀದಿ ನಿಂತ್ರೆ, ಸರ್ಕಾರಕ್ಕೆ ಕೋಟಿ, ಕೋಟಿ ನಷ್ಟ ಉಂಟಾಗಲಿದೆ. ಜೊತೆಗೆ ಮದ್ಯ ಪ್ರಿಯರಿಗೂ ಎಣ್ಣೆ ಸಿಗದೆ ಪರದಾಡುವಂತಾಗುತ್ತೆ.

- Advertisement -
spot_img

Latest News

error: Content is protected !!