Thursday, June 4, 2026
Homeತಾಜಾ ಸುದ್ದಿಫ್ಯಾಟ್ ಸರ್ಜರಿಗೆ ಹೋಗಿದ್ದ ಗೀತಾ ಧಾರಾವಾಹಿ ಖ್ಯಾತಿಯ ನಟಿ ಸಾವು: ವೈದ್ಯರ ವಿರುದ್ಧ ಪಾಲಕರ ಆರೋಪ

ಫ್ಯಾಟ್ ಸರ್ಜರಿಗೆ ಹೋಗಿದ್ದ ಗೀತಾ ಧಾರಾವಾಹಿ ಖ್ಯಾತಿಯ ನಟಿ ಸಾವು: ವೈದ್ಯರ ವಿರುದ್ಧ ಪಾಲಕರ ಆರೋಪ

- Advertisement -
- Advertisement -

ಬೆಂಗಳೂರು: ಕಿರುತೆರೆ ನಟಿಯಾಗಿದ್ದ ಚೇತನಾ ರಾಜ್ (21) ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಫ್ಯಾಟ್ ಸರ್ಜರಿ ವೇಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿ‌ನ ಅಂಶ ಶೇಖರಣೆಯಾಗಿ ಚೇತನಾ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಫ್ಯಾಟ್ ಚಿಕಿತ್ಸೆಗೆಂದು ನಿನ್ನೆ ಬೆಳಗ್ಗೆ ಬೆಂಗಳೂರಿನ ನವರಂಗ ವೃತ್ತದಲ್ಲಿದಲ್ಲಿರುವ ಡಾ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಗೆ ಚೇತನಾ ದಾಖಲಾಗಿದ್ದರು. ಸಂಜೆ ವೇಳೆಗೆ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಶಂಕರಮಠದ ಕಾಡೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಟಿ ಚೇತನಾ ಮೃತರಾಗಿದ್ದಾರೆ.

ಪೋಷಕರಿಗೆ ಮಾಹಿತಿಯಿಲ್ಲದೇ ಚೇತನಾ ಸರ್ಜರಿ ಮಾಡಿಸಿಕೊಂಡಿದ್ದರು ಎಂದು ಕೂಡಾ ಹೇಳಲಾಗಿದ್ದು, ಚೇತನಾ ಪೋಷಕರು ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಆರೋಪ ಮಾಡಿದ್ದಾರೆ.

ಖಾಸಗಿ ಮನರಂಜನಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ, ದೊರೆಸಾನಿ ಹಾಗೂ ಒಲವಿನ ನಿಲ್ದಾಣ ಧಾರವಾಹಿಗಳಲ್ಲಿ ಚೇತನಾ ನಟಿಸುತ್ತಿದ್ದರು. ಅಲ್ಲದೇ ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಹವಾಯಾಮಿ ಸಿನಿಮಾದಲ್ಲೂ ಚೇತನಾ ನಟಿಸಿದ್ದಾರೆ.

- Advertisement -

Latest News

error: Content is protected !!