Sunday, June 7, 2026
Homeಕರಾವಳಿಪುತ್ತೂರಿನ ಯುವತಿಯ ಅಪಹರಣ ಪ್ರಕರಣ; ಆರು ಮಂದಿಯ ವಿರುದ್ಧ ದೂರು ದಾಖಲು

ಪುತ್ತೂರಿನ ಯುವತಿಯ ಅಪಹರಣ ಪ್ರಕರಣ; ಆರು ಮಂದಿಯ ವಿರುದ್ಧ ದೂರು ದಾಖಲು

- Advertisement -
- Advertisement -

ಪುತ್ತೂರು : ಉದ್ಯೋಗ ನಿಮಿತವಾಗಿ ಪುತ್ತೂರಿನ ಬಲ್ನಾಡಿನಿಂದ ಕಡಬಕ್ಕೆ ಬರುತ್ತಿದ್ದ ಯುವತಿಯನ್ನು ಆಕೆಯ ಮನೆಯ ಪಕ್ಕದಿಂದಲೇ ಅಪಹರಿಸಿ ಕೇರಳಕ್ಕೆ ಸಾಗಿಸಿದ ಪ್ರಕರಣ ನಡೆದಿದೆ. ಆರೋಪಿಗಳ ವಿರುದ್ದ ಈಗಾಗಲೇ ಯುವತಿ ದೂರು ನೀಡಿದ್ದು, ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ 10 ಮಂಗಳವಾರದಂದು ಯುವತಿಯು ತನ್ನ ಮನೆಯಿಂದ ಕೆಲಸಕ್ಕೆ ತೆರಳುವ ಸಮಯದಲ್ಲಿ ಬಲ್ನಾಡು ದಂಡನಾಯಕ ಉಳ್ಳಾಳ್ತಿ ದೇವಸ್ಥಾನದ ಸಮೀಪ 4 ಜನ ಅಪರಿಚಿತರು ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದಾರೆ. ನಂತರ ಪರಮೇಶ್ವರಿ ಹಾಗೂ ರವಿ ನಾರಾಯಣರ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ನಾರಾಯಣ ಪ್ರಸಾದ್ ಹಾಗೂ ಇಬ್ಬರು  ಗಂಡಸರು ಸೇರಿ ಯುವತಿಯನ್ನು ಹೊಡೆದು ಬಲವಂತವಾಗಿ ಬಟ್ಟೆ ತೆಗೆಯಲು ಪ್ರಯತ್ನಪಟ್ಟಿದ್ದಾರೆ. 

ಈ ಸಂದರ್ಭದಲ್ಲಿ ಪ್ರಕರಣದ ಪ್ರಮುಖ ಆರೋಪಿಗಳಾದ ಪರಮೇಶ್ವರಿ, ರವಿನಾರಾಯಣ , ಆದರ್ಶ, ಅರವಿಂದ, ನಾರಾಯಣ ಎಂಬವರು ಮತ್ತು ಬರುವ ಪಾನಿಯವನ್ನು ಕುಡಿಸಿ ಪ್ರಜ್ಞೆ ತಪ್ಪಿಸಿ ಕಾರಿನಲ್ಲಿ ಕಣ್ಣೂರಿಗೆ ಕರೆದುಕೊಂಡು ಹೋಗಿದ್ದರು ಎಂದು ದೂರಿನಲ್ಲಿ ಯುವತಿ ಹೇಳಿದ್ದಾರೆ.  

ಈ ಘಟನೆಯ ಪ್ರಮುಖ ಆರೋಪಿಗಳು ಪರಮೇಶ್ವರಿ, ರವಿನಾರಾಯಣ, ಆದರ್ಶ, ಅರವಿಂದ, ನಾರಾಯಣ ಎಂದು ತಿಳಿದು ಬಂದಿದ್ದು, ದುರುದ್ದೇಶದಿಂದ ಅಪಹರಣ ಮಾಡಿದ ಆರು ಜನ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕ್ಕಾಗಿ ಯುವತಿ ದೂರು  ದಾಖಲಿಸಿದ್ದಾಳೆ.

- Advertisement -

Latest News

error: Content is protected !!