Thursday, June 4, 2026
Homeತಾಜಾ ಸುದ್ದಿಅಪ್ಪನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಬರುವಾಗ ಅಪಘಾತ: ಪುತ್ರನ ಅಂಗಾಂಗ ದಾನ ಮಾಡಿದ ಕುಟುಂಬ

ಅಪ್ಪನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಬರುವಾಗ ಅಪಘಾತ: ಪುತ್ರನ ಅಂಗಾಂಗ ದಾನ ಮಾಡಿದ ಕುಟುಂಬ

- Advertisement -
- Advertisement -

ಹಾಸನ: ಅಪ್ಪನನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿಸಿಕೊಂಡು ಬರಲು ಹೋಗಿ ತಾನೇ ಅಪಘಾತಕ್ಕೆ ತುತ್ತಾಗಿ ಮಗ ಸಾವಿಗೀಡಾಗಿರುವ ಘಟನೆ ಹಾಸನದ ರಾಜಘಟ್ಟ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಉಮೇಶ್ ಮೃತ ದುರ್ದೈವಿ.

ಉಮೇಶ್ ತಮ್ಮ ತಂದೆಯನ್ನು ಅನಾರೋಗ್ಯ ಹಿನ್ನೆಲೆ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಿದ ನಂತರ ಮೇ 6ರಂದು ಮನೆಗೆ ಕರೆದೊಯ್ಯಲು ತನ್ನ ಪತ್ನಿ ಮನೆಯಾದ ರಾಜಘಟ್ಟದಿಂದ ಆಸ್ಪತ್ರೆಗೆ ಬರುವ ವೇಳೆ ಹಾಸನದ ರಾಜಘಟ್ಟ ಬೈಪಾಸ್ ರಸ್ತೆಯಲ್ಲಿ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸತೀಶ್​ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರಿಗೆ ಹಾಸನದ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಟರ್ ಆರ್.ವಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಪಘಾತದ ತೀವ್ರತೆಗೆ ಮೆದುಳು ನಿಷ್ಕ್ರಿಯಗೊಂಡಿತ್ತು. ಹಾಗಾಗಿ ಅವರ ಅಂಗಾಂಗ ದಾನ ಮಾಡಲು ಕುಟಂಬದವರು ನಿರ್ಧರಿಸಿದ್ದಾರೆ. ಉಮೇಶ್ ದೇಹದಿಂದ ಹೃದಯ, ಕಣ್ಣುಗಳು, ಯಕೃತ್, ಸೇರಿದಂತೆ ವಿವಿಧ ಅಂಗಾಂಗಗಳನ್ನು ದಾನ ಮಾಡಲಾಗಿದೆ.

- Advertisement -

Latest News

error: Content is protected !!