Tuesday, May 7, 2024
HomeUncategorizedಪ್ರೇಯಸಿಯನ್ನು ಬೈಕ್ ನಲ್ಲಿ ಎದುರು ಕೂರಿಸಿಕೊಂಡು ರೋಮ್ಯಾನ್ಸ್ ರೈಡ್ : ಹುಚ್ಚು ಪ್ರೇಮಿಗಳ ವರ್ತನೆಗೆ...

ಪ್ರೇಯಸಿಯನ್ನು ಬೈಕ್ ನಲ್ಲಿ ಎದುರು ಕೂರಿಸಿಕೊಂಡು ರೋಮ್ಯಾನ್ಸ್ ರೈಡ್ : ಹುಚ್ಚು ಪ್ರೇಮಿಗಳ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ

spot_img
- Advertisement -
- Advertisement -

ಚಾಮರಾಜನಗರ:  ಬೈಕ್​ನ​ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ‌ಯನ್ನು ಕೂರಿಸಿಕೊಂಡು ಬಾಯ್​ಫ್ರೆಂಡ್​ ಜಾಲಿ ರೈಡ್ ಜತೆಗೆ ರೊಮ್ಯಾನ್ಸ್​ ಮಾಡಿರುವ ಘಟನೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ನಡೆದಿದೆ. ನಡುರಸ್ತೆಯಲ್ಲೇ ತುಸು ಮುಜುಗರವಿಲ್ಲದೇ ಬೈಕ್​ ನಲ್ಲಿಯೇ ಪರಸ್ಪರ ಚುಂಬಿಸುವ ಮೂಲಕ ಮೈ ಮರೆತಿದ್ದಾರೆ.

ಈ ದೃಶ್ಯವನ್ನು ಹಿಂಬದಿಯ ಸವಾರರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಪ್ರೇಮಿಗಳ ಈ ಹುಚ್ಚಾಟವನ್ನು ನೋಡಿದ ದಾರಿಹೋಕರು ಮನಸ್ಸಿನಲ್ಲೇ ಬೈದುಕೊಂಡು ತಮ್ಮ ಪಾಡಿಗೆ ಮುಂದೆ ಸಾಗಿದ್ದಾರೆ. ಜನರನ್ನೂ ಲೆಕ್ಕಿಸದೇ ಕಿ.ಮೀಟರ್​ಗಟ್ಟಲೇ ಈ ಪ್ರೇಮಿಗಳು ಬೈಕ್​ ಮೇಲೆ ಚೆಲ್ಲಾಟ ಆಡಿದ್ದಾರೆ. ಟ್ಯಾಂಕ್ ಮೇಲೆ ಕುಳಿತಿರುವ ಯುವತಿ, ಪ್ರಿಯಕರನನ್ನು ಬಿಗಿದಪ್ಪಿಕೊಂಡು ಸಾಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಪ್ರೇಮಿಗಳ ಈ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. 

- Advertisement -
spot_img

Latest News

error: Content is protected !!