- Advertisement -
- Advertisement -
ಬೆಂಗಳೂರು: ಕಳೆದ ವರ್ಷ2020ರಲ್ಲಿ ದಿಯಾ ಸಿನಿಮಾ ತೆರೆಕಂಡು ಪ್ರೇಕ್ಷಕರ ಹೃದಯ ಗೆದ್ದಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೊಮ್ಯಾಂಟಿಕ್ ಫೀಲಿಂಗ್ ಸಿನಿಮಾಗೆ ಚಿತ್ರಪ್ರೇಕ್ಷಕರು ಸೈ ಎಂದಿದ್ದರು.ಚಿತ್ರದಲ್ಲಿ ನಟ ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬರ್ ನಾಯಕಿಯಾಗಿ ಖುಷಿ ರವಿ ಬಹಳ ಮೆಚ್ಚುಗೆಯಾಗಿದ್ದರು.
ರಿಲೀಸ್ ಆಗಿ ಒಂದು ವರ್ಷ ಕಳೆದರೂ ಚಿತ್ರದ ಪ್ರಸಿದ್ಧಿಗಾಗಿ ಸೂಪರ್ ಹಿಟ್ ದಿಯಾ ಸಿನಿಮಾ ಮತ್ತೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಪ್ರೇಮಿಗಳ ದಿನಾಚರಣೆಯ ವಿಶೇಷವಾಗಿ ಸಿನಿಮಾವನ್ನು ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ನಡೆಸಿದೆ.ಚಿತ್ರಮಂದಿರಗಳಲ್ಲಿ ಈ ಹಿಂದೆ ನೋಡಲು ಸಾಧ್ಯ ವಾಗದಿದ್ದಲ್ಲಿ ಮತ್ತೊಮ್ಮೆ ಅವಕಾಶ ಒದಗಿಸಿರುವ ಕುರಿತು ಪ್ರೇಮಿಗಳು ಖುಷ್ ಆಗಿದ್ದಾರೆ.
- Advertisement -