Wednesday, May 1, 2024
Homeತಾಜಾ ಸುದ್ದಿರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಂಟೇನರ್ ಲಾರಿಗೆ ಕಾರು ಡಿಕ್ಕಿ: ಅಬಕಾರಿ ಎಸ್‌ಐ ಸೇರಿ ಸ್ಥಳದಲ್ಲೇ...

ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಂಟೇನರ್ ಲಾರಿಗೆ ಕಾರು ಡಿಕ್ಕಿ: ಅಬಕಾರಿ ಎಸ್‌ಐ ಸೇರಿ ಸ್ಥಳದಲ್ಲೇ ನಾಲ್ವರು ಸಾವು

spot_img
- Advertisement -
- Advertisement -

ಹಾಸನ: ಕಂಟೇನರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ನಡೆದಿದೆ.

ಕಾರಿನಲ್ಲಿದ್ದ ಮಂಜುನಾಥ್, ಚೇತನ್, ವಿಕ್ರಂ, ಅಭಿಷೇಕ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತ ನಾಲ್ವರು ಬೆಂಗಳೂರು ಮೂಲದವರಾಗಿದ್ದಾರೆ. ಮೃತಪಟ್ಟವರೆಲ್ಲರೂ 25ರಿಂದ 30ರ ವಯಸ್ಸಿನೊಳಗಿನವರಾಗಿದ್ದಾರೆ. ಮೃತರ ಪೈಕಿ ಚೇತನ್ ಅಬಕಾರಿ ಸಬ್ ಇನ್ ಸ್ಪೆಕ್ಟರ್ ಆಗಿ ಇತ್ತೀಚೆಗೆ ನೇಮಕಗೊಂಡಿದ್ದರು. ಅಭಿಷೇಕ್, ಮಂಜುನಾಥ್, ವಿಕ್ರಂ ಐಟಿ ಉದ್ಯೋಗಿಗಳಾಗಿದ್ದರು.

ಚೇತನ್ ಡ್ಯೂಟಿ ರಿಪೋರ್ಟ್ ಮಾಡಲೆಂದು ಉಳಿದ ಮೂವರು ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಮೃತದೇಹಗಳನ್ನು ಚನ್ನರಾಯಪಟ್ಟಣ ಸರಕಾರಿ ಶವಾಗಾರದಲ್ಲಿರಿಸಲಾಗಿದೆ. ಈ ಬಗ್ಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಹಿನ್ನೆಲೆ ಚನ್ನರಾಯಪಟ್ಟಣ ಸರಕಾರಿ ಶವಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಭೇಟಿ ನೀಡಿದರು.

- Advertisement -
spot_img

Latest News

error: Content is protected !!