Friday, April 19, 2024
Homeತಾಜಾ ಸುದ್ದಿಮದುವೆಯಾಗಲು ಒಲ್ಲೆ ಎಂದ ಪ್ರೇಯಸಿ: ಹೈ-ಟೆನ್ಶನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಏರಿದ ಪ್ರೇಮಿ

ಮದುವೆಯಾಗಲು ಒಲ್ಲೆ ಎಂದ ಪ್ರೇಯಸಿ: ಹೈ-ಟೆನ್ಶನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಏರಿದ ಪ್ರೇಮಿ

spot_img
- Advertisement -
- Advertisement -

ತಮಿಳುನಾಡು: ಪ್ರೀತಿಸಿದಾಕೆ ಮದುವೆಯಾಗಲು ನೋ ಎಂದಿದ್ದಕ್ಕೆ  ಪ್ರೇಮಿಯೊಬ್ಬ ಹೈ-ಟೆನ್ಶನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿ ಕುಳಿತ ಘಟನೆ ಚೆನ್ನೈನಲ್ಲಿ ನಡೆದಿದೆ. ಚೆನ್ನೈನ ಕ್ರೋಮ್‌ಪೇಟ್‌ನಲ್ಲಿ 19 ವರ್ಷದ ಯುವಕನೊಬ್ಬ ತಾಂಬರಂ ಸ್ಯಾನಿಟೋರಿಯಂ ಪ್ರದೇಶದಲ್ಲಿನ ಹೈ-ಟೆನ್ಶನ್ ಎಲೆಕ್ಟ್ರಿಕಲ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿದ್ದರಿಂದ ಉಪನಗರ ರೈಲು ಸೇವೆಗಳಲ್ಲಿ ವ್ಯತ್ಯಯವಾಗಿತ್ತು.

15 ವರ್ಷದ ಹುಡುಗಿಯೊಬ್ಬಳನ್ನು ಈತ ಪ್ರೀತಿಸ್ತಾ ಇದ್ದು, ತನ್ನನ್ನು ಮದುವೆಯಾಗುವಂತೆ ಅವಳ ಮನವೊಲಿಸಲು ಈ ಹುಚ್ಚು ಸಾಹಸ ಮಾಡಿದ್ದಾನೆ. ಈ ಯುವಕನನ್ನು ಕೃಷ್ಣ ಎಂದು ಗುರುತಿಸಲಾಗಿದ್ದು, ಈತ ರಾಧಾ ನಗರ ನಿವಾಸಿ. ಪೇಂಟರ್‌ ಆಗಿ ಈತ ಕೆಲಸ ಮಾಡ್ತಿದ್ದಾನೆ. ಅದೇ ಏರಿಯಾದಲ್ಲಿ ವಾಸಿಸ್ತಾ ಇರೋ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳನ್ನು ಕೃಷ್ಣ ಪ್ರೀತಿಸುತ್ತಿದ್ದ. ತನ್ನನ್ನು ಮದುವೆಯಾಗುವಂತೆ ಆಕೆಗೆ ಪ್ರಪೋಸ್‌ ಮಾಡಿದ್ದಾನೆ.

ಆದ್ರೆ ಆ ಹುಡುಗಿ ಮದುವೆಗೆ ಒಪ್ಪಿಲ್ಲ. ಬಳಿಕ ಯುವಕ 80 ಅಡಿ ಎತ್ತರದ ವಿದ್ಯುತ್‌ ಟವರ್‌ ಅನ್ನು ಹತ್ತಿ ಕುಳಿತಿದ್ದಾನೆ. ಬೆಳಗ್ಗೆ 8 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಕೂಡಲೇ ಟವರ್‌ಗೆ ವಿದ್ಯುತ್‌ ಪೂರೈಕೆಯನ್ನು ಸ್ಥಗಿತಗೊಳಿಸಲಾಯ್ತು. ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ರು. ಪೊಲೀಸರು, ಸ್ನೇಹಿತರು ಹಾಗೂ ಕುಟುಂಬಸ್ಥರು ಎಷ್ಟೇ ಮನವೊಲಿಸಲು ಯತ್ನಿಸಿದ್ರೂ ಯುವಕ ಟವರ್‌ನಿಂದ ಕೆಳಕ್ಕಿಳಿಯಲೇ ಇಲ್ಲ. ಬಳಿಕ ಆ ವಿದ್ಯಾರ್ಥಿನಿಯನ್ನೇ ಸ್ಥಳಕ್ಕೆ ಕರೆಸಲಾಯ್ತು. ಆಕೆ ಮದುವೆಯಾಗುವುದಾಗಿ ಮಾತು ಕೊಟ್ಟ ಬಳಿಕ ಯುವಕ ಟವರ್‌ನಿಂದ ಕೆಳಕ್ಕೆ ಇಳಿದಿದ್ದಾನೆ. ಆತನ ವಿರುದ್ಧ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!