Thursday, May 2, 2024
Homeತಾಜಾ ಸುದ್ದಿನೀಟ್ ಪರೀಕ್ಷೆ ವೇಳೆ ಒಳ ಉಡುಪು ಕಳಚುವಂತೆ ತಿಳಿಸಿದ ಕೊಠಡಿ ಮೇಲ್ವಿಚಾರಕ : ಕೇರಳದಲ್ಲೊಂದು ಆಘಾತಾಕಾರಿ...

ನೀಟ್ ಪರೀಕ್ಷೆ ವೇಳೆ ಒಳ ಉಡುಪು ಕಳಚುವಂತೆ ತಿಳಿಸಿದ ಕೊಠಡಿ ಮೇಲ್ವಿಚಾರಕ : ಕೇರಳದಲ್ಲೊಂದು ಆಘಾತಾಕಾರಿ ಘಟನೆ 

spot_img
- Advertisement -
- Advertisement -

ಕೇರಳ;ನೀಟ್ ಪರೀಕ್ಷೆಯಲ್ಲಿ ಪರೀಕ್ಷೆ ಕೊಠಡಿ ಪ್ರವೇಶಿಸಲು ವಿದ್ಯಾರ್ಥಿನಿಗೆ ಒಳ ಉಡುಪು ಕಳಚುವಂತೆ ಪರೀಕ್ಷಾ ಕೊಠಡಿ ಮೇಲ್ವಿಚಾರಕ ಸೂಚಿಸಿದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಕೊಲ್ಲಂ ಜಿಲ್ಲೆಯ ಚಡಮಂಗಳದ ಮಾರ್ಥೋಮಾ ಇನ್ಸ್​ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಸೆಂಟರ್​ನ NEET ಪರೀಕ್ಷಾ ಕೇಂದ್ರದಲ್ಲಿ ಇಂತಹ ನೀಚ ಘಟನೆ ನಡೆದಿದೆ ಎನ್ನಲಾಗಿದೆ.

ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಈಗಾಗಲೇ ದೂರು ದಾಖಲಿಸಿದ್ದಾರೆ. ಪರೀಕ್ಷಾ ಕೇಂದ್ರ ಪ್ರವೇಶಿಸಲು ಒಳ ಉಡುಪು ಕಳಚುವಂತೆ ಹೇಳಿದ್ದು ವಿದ್ಯಾರ್ಥಿನಿಯ ಮೇಲೆ ಮಾನಸಿಕ ಆಘಾತ ಬೀರಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಸಿಎನ್ ಎನ್ ವರದಿ ಮಾಡಿದೆ.

ಪರೀಕ್ಷೆ ಕೊಠಡಿ ಪ್ರವೇಶಕ್ಕೆ ಮೊದಲು ತಮ್ಮ ಒಳ ಉಡುಪನ್ನು ತೆಗೆಯುವಂತೆ ಹೇಳಿ ಆರಂಭಿಕ 100 ವಿದ್ಯಾರ್ಥಿನಿಯರನ್ನು ಅವಮಾನಿಸಲಾಗಿದೆ. ಡ್ರೆಸ್ ಕೋಡ್ ಪ್ರಕಾರ, ವಿದ್ಯಾರ್ಥಿಗಳು ಪರೀಕ್ಷಾ ಹಾಲ್‌ಗೆ ಪ್ರವೇಶಿಸುವಾಗ ಯಾವುದೇ ಲೋಹದ ವಸ್ತು ಅಥವಾ ಪರಿಕರಗಳನ್ನು ಧರಿಸಲು ಮಾತ್ರವಷ್ಟೇ ಅನುಮತಿ ಇದ್ದಿರಲಿಲ್ಲ. ಆದರೆ ವಿದ್ಯಾರ್ಥಿನಿಯರ ಬಳಿ ಒಳ ಉಡುಪನ್ನು ತೆಗೆದಿಡುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಹೇಳಿದ್ದಾಗಿ ಆರೋಪ ಕೇಳಿಬಂದಿದೆ.

- Advertisement -
spot_img

Latest News

error: Content is protected !!