Wednesday, June 3, 2026
Homeಮನರಂಜನೆಲವ್ ಮಾಕ್ಟೇಲ್-2‌ಗೆ ಸಜ್ಜಾದ ಕೃಷ್ಣ- ಮಿಲನಾ: ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ

ಲವ್ ಮಾಕ್ಟೇಲ್-2‌ಗೆ ಸಜ್ಜಾದ ಕೃಷ್ಣ- ಮಿಲನಾ: ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ

- Advertisement -
- Advertisement -

ಡಾರ್ಲಿಂಗ್ ಕೃಷ್ಣ -ಮಿಲನಾ ನಾಗರಾಜ್​ ನಟನೆಯ ‘ಲವ್​ ಮಾಕ್ಟೇಲ್’​ ಸಿನಿಮಾ ಜನವರಿ 31 ರಂದು ತೆರೆಕಂಡಿತು. ಆದಿ-ನಿಧಿಮಾ ಪಾತ್ರದಲ್ಲಿ ಇವರಿಬ್ಬರು ಕಾಣಿಸಿಕೊಂಡಿದ್ದರು. ಈ ಸಿನಿಮಾ ಥಿಯೇಟರ್​ನಲ್ಲಿ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣದಿದ್ದರು ಓಟಿಟಿ ಫ್ಲಾಟ್​ಫಾರ್ಮ್​ನಲ್ಲಿ ದೊಡ್ಡ ಸಂಚಲನವನ್ನು ಸೃಷ್ಠಿಸಿತ್ತು. ಅನೇಕರು ಇಂತಹದೊಂದು ಸಿನಿಮಾವನ್ನು ಥಿಯೇಟರ್​ನಲ್ಲಿ ನೋಡಲಾಗಲಿಲ್ಲ ಎಂಬ ಬೇಸರವನ್ನು ಹೊರ ಹಾಕಿದ್ದರು.

ಆದರು ಓಟಿಟಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡು ಸಾಕಷ್ಟು ಜನರಿಗೆ ಇಷ್ಟವಾಗಿತ್ತು. ಲವ್​ ಮಾಕ್ಟೇಲ್​ ಸಿನಿಮಾದ ಯಶಸ್ವಿ ನಂತರ ಡಾಲಿಂಗ್​ ಕೃಷ್ಣ ಮತ್ತು ಮಿಲನಾ ನಾಗರಾಜ್​​ ಪಾರ್ಟ್​ -2 ತರಬೇಕೆಂದು ಯೋಜನೆ ಹಾಕಿದ್ದರು. ಆ ವಿಚಾರವನ್ನು ಹೇಳಿಕೊಂಡಿದ್ದರು. ಅದರಂತೆ ಸ್ಕ್ರೀಪ್​​ ಕೆಲಸಗಳು ನಡೆಯುತ್ತಿತ್ತು. ಇದೀಗ ಲವ್​ ಮಾಕ್ಟೇಲ್​ -2 ದ ಸ್ಕ್ರಿಪ್ಟ್ ಪೂಜೆ ನಡೆದಿದೆ.

ಇನ್ನು ಲಾಕ್‌ಡೌನ್ ಟೈಮಲ್ಲಿ ಲವ್ ಮಾಕ್ಟೇಲ್ ಚಿತ್ರದ ಮುಂದುವರಿದ ಭಾಗದ ಸ್ಕ್ರಿಪ್ಟ್ ರೆಡಿಯಾಗಿದ್ದು, ಆದಿ ಅದಿತಿಯನ್ನ ಬಿಟ್ಟ ಬಳಿಕ ಆತನ ಜೀವನದಲ್ಲಿ ಏನೆಲ್ಲ ನಡೆಯಲಿದೆ ಎಂಬ ಬಗ್ಗೆ ಸ್ಕ್ರಿಪ್ಟ್ ರೆಡಿಯಾಗಿದೆ. ಲವ್ ಮಾಕ್ಟೇಲ್‌ಗಿಂತ ಇದರ ಸೀಕ್ವೆಲ್‌ನಲ್ಲಿ ಹೆಚ್ಚು ಮಜಾ ಇದೆ, ಪ್ರೀತಿ ತಮಾಷೆ ಎಲ್ಲವೂ ಇದೆ ಅಂತಾರೆ ಡಾರ್ಲಿಂಗ್ ಕೃಷ್ಣ.

ಸದ್ಯ ಸಿನಿಮಾ ಶೂಟಿಂಗ್‌ಗೆ ಅನುಮತಿ ಇಲ್ಲದ ಕಾರಣ, ಸರ್ಕಾರದಿಂದ ಶೂಟಿಂಗ್‌ಗೆ ಅನುಮತಿ ಸಿಕ್ಕ ಕೂಡಲೇ ಶೂಟಿಂಗ್ ಶುರು ಮಾಡಲು ಕೃಷ್ಣ ನಿರ್ಧರಿಸಿದ್ದಾರೆ.

- Advertisement -

Latest News

error: Content is protected !!