Friday, June 5, 2026
Homeತಾಜಾ ಸುದ್ದಿಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಸ್ಫೋಟ, ಅಕ್ಕಪಕ್ಕದ ಮನೆಗಳಿಗೆ ಹಾನಿ

ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ನಾಡಬಾಂಬ್ ಸ್ಫೋಟ, ಅಕ್ಕಪಕ್ಕದ ಮನೆಗಳಿಗೆ ಹಾನಿ

- Advertisement -
- Advertisement -

ಶಿವಮೊಗ್ಗ : ನಾಡಬಾಂಬ್ ಸ್ಪೋಟಗೊಂಡು, ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿರುವಂತ ಘಟನೆ  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಬಳಿಯ ಕಣ್ಣೂರು ಗ್ರಾಮದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕಣ್ಣೂರು ಗ್ರಾಮದಲ್ಲಿ ಸಂಗಿ ಕರಿಯಪ್ಪ ಮತ್ತು ಸಂಗಿ ರವಿ ಎಂಬುವರು ಬಚ್ಚಲು ಮನೆಯಲ್ಲಿ ನಾಡಬಾಂಬ್ ಸಂಗ್ರಹಿಸಿಟ್ಟಿದ್ದರು ಎಂದು ಹೇಳಲಾಗುತ್ತಿದೆ. ಇಂತಹ ನಾಡಬಾಂಬ್ ಗಳು ಆಕಸ್ಮಿಕವಾಗಿ ಸ್ಪೋಟಗೊಂಡ ಪರಿಣಾಮ, ಅವರ ಮನೆ ಹಾಗೂ ಅಕ್ಕ ಪಕ್ಕದ ಮನೆಗಳು ನಾಶಗೊಂಡಿರೋದಾಗಿ ತಿಳಿದು ಬಂದಿದೆ.

ದೂರದಲ್ಲಿದ್ದಂತ ಬಚ್ಚಲು ಮನೆಯಲ್ಲಿ ನಾಡಬಾಂಬ್ ದಿಢೀರ್ ಸ್ಪೋಟಗೊಂಡಿದ್ದರಿಂದಾಗಿ ಮನೆಗಳಿಗೆ ನಾಶವಾಗಿದೇ ವಿನಹ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ. ಇದೀಗ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಆಗಮಿಸಿದ್ದು, ತನಿಖೆ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

- Advertisement -

Latest News

error: Content is protected !!