Sunday, May 5, 2024
Homeತಾಜಾ ಸುದ್ದಿಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ : ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾದ...

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ : ಎಸ್ ಐಟಿ ಮುಂದೆ ವಿಚಾರಣೆಗೆ ಹಾಜರಾದ ನರೇಶ್ ಗೌಡ ಹಾಗೂ ಶ್ರವಣ್

spot_img
- Advertisement -
- Advertisement -

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಆರೋಪಿಗಳು ಎನ್ನಲಾದ ಬಿ.ಎಂ.ನರೇಶ್​ ಗೌಡ ಮತ್ತು ಶ್ರವಣ್​ ಇವರಿಬ್ಬರು ಇಂದು ಎಸ್​ಐಟಿ(ವಿಶೇಷ ತನಿಖಾ ತಂಡ) ಮುಂದೆ ಹಾಜರಾಗಿದ್ದಾರೆ.

ನರೇಶ್​ ಮತ್ತು ಶ್ರವಣ್​ಗೆ ಜೂ.8ರಂದು ನಿರೀಕ್ಷಣಾ ಜಾಮೀನು ಮಂಜೂರಾಗಿತ್ತು. ಜಾಮೀನು ಸಿಕ್ಕ ನಾಲ್ಕು ದಿನಕ್ಕೆ ಅಂದರೆ ಜೂ.12ರಂದು ತಮ್ಮ ವಕೀಲರೊಂದಿಗೆ ಆಡುಗೋಡಿ ಟೆಕ್ನಿಕಲ್​ ಸೆಂಟರ್​ನಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದು, ಸಿಸಿಬಿ ಎಸಿಪಿ ಧರ್ಮೇಂದ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಇಬ್ಬರೂ ಏನೆಲ್ಲ ಬಾಯ್ಬಿಡ್ತಾರೆ ಎಂಬುದು ಕೆಲ ಹೊತ್ತಿನಲ್ಲೇ ಗೊತ್ತಾಗಲಿದೆ. 

 ಇತ್ತ ನರೇಶ್​ ಮತ್ತು ಶ್ರವಣ್​ನನ್ನು ಬಂಧಿಸುವಲ್ಲಿ ತನಿಖಾಧಿಕಾರಿಗಳು ಸ್ವತಂತ್ರರು ಎಂದು ಕೋರ್ಟ್​ ಹೇಳಿತ್ತು. ಅವಶ್ಯವಿದ್ದಲ್ಲಿ ಬಂಧಿಸುವ ಸಾಧ್ಯತೆ ಇದ್ದು, ಶ್ರವಣ್​ ಮತ್ತು ನರೇಶ್​ ಕಥೆ ಏನಾಗುತ್ತೆ ಎಂಬ ಕುತೂಹಲ ಹೆಚ್ಚಿದೆ.

ಅಶ್ಲೀಲ ಸಿಡಿ ಬಯಲಾಗುತ್ತಿದ್ದಂತೆ ನರೇಶ್​ ಮತ್ತು ಶ್ರವಣ್​ ವಿರುದ್ಧ ರಮೇಶ್​ ಜಾರಕಿಹೊಳಿ ಹನಿಟ್ರ್ಯಾಪ್​ ಮತ್ತು ಬ್ಯ್ಲಾಕ್​ಮೇಲ್​ ಆರೋಪ ಮಾಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

- Advertisement -
spot_img

Latest News

error: Content is protected !!