Sunday, June 7, 2026
Homeತಾಜಾ ಸುದ್ದಿಬಂಟ್ವಾಳ: ನಾವೆಲ್ಲರೂ ಧರ್ಮಕ್ಕೆ ಬದ್ಧರಾಗೋಣ, ಧರ್ಮ ರಕ್ಷಣೆ ಮಾಡಬೇಕು- ಧರ್ಮ ಉಳಿದರೆ ದೇಶ ಉಳಿದೀತು: ಶ್ರೀ...

ಬಂಟ್ವಾಳ: ನಾವೆಲ್ಲರೂ ಧರ್ಮಕ್ಕೆ ಬದ್ಧರಾಗೋಣ, ಧರ್ಮ ರಕ್ಷಣೆ ಮಾಡಬೇಕು- ಧರ್ಮ ಉಳಿದರೆ ದೇಶ ಉಳಿದೀತು: ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ

- Advertisement -
- Advertisement -

ಬಂಟ್ವಾಳ: ಧರ್ಮರಕ್ಷಣೆಗೆ ನಾವು ಬದ್ಧರಾದರಷ್ಟೇ ದೇಶದ ಉಳಿಯುತ್ತದೆ. ಜಗತ್ತು ನಿಂತಿರುವುದೇ ಧರ್ಮದ ಆಧಾರದಲ್ಲಿ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ನಾವೆಲ್ಲರೂ ಧರ್ಮಕ್ಕೆ ಬದ್ಧರಾಗೋಣ ಎಂದು ಹೇಳಿದ ಸ್ವಾಮೀಜಿ, ಧರ್ಮ ರಕ್ಷಣೆ ಮಾಡಬೇಕು. ಧರ್ಮ ಉಳಿದರೆ ದೇಶ ಉಳಿದೀತು. ದೇವಸ್ಥಾನ ಸಮಾಜಕ್ಕೆ ಪ್ರೇರಣೆ ನೀಡುತ್ತದೆ. ಬ್ರಹ್ಮಕಲಶೋತ್ಸವ ನಮ್ಮ ಶ್ರದ್ಧೆಯನ್ನು ಹೆಚ್ಚಿಸುತ್ತದೆ ಎಂದರು.

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಶುಭ ಹಾರೈಸಿ ಆಶೀರ್ವಚನ ನೀಡಿದರು.

- Advertisement -

Latest News

error: Content is protected !!