Thursday, May 16, 2024
Homeತಾಜಾ ಸುದ್ದಿಹಿರಿಯ ನಟಿ ಭಾರ್ಗವಿ ನಾರಾಯಣ ವಿಧಿವಶ

ಹಿರಿಯ ನಟಿ ಭಾರ್ಗವಿ ನಾರಾಯಣ ವಿಧಿವಶ

spot_img
- Advertisement -
- Advertisement -

ಬೆಂಗಳೂರು: ಸ್ಯಾಂಡಲ್ವುಡ್ ನ ಹಿರಿಯ ನಟಿ ಭಾರ್ಗವಿ ಅವರು ಇಂದು ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ.

84 ವರ್ಷದ ಭಾರ್ಗವಿ ಅವರು ಸಿನಿಮಾ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಇನ್ನು ತಮ್ಮ ಅಜ್ಜಿಯ ನಿಧನದ ಸಂಬಂಧ ನಟಿ ಸಂಯುಕ್ತಾ ಹೊರನಾಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

2019ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಭಾರ್ಗವಿ ಅವರು, ಎರಡು ಕನಸು, ಹಂತಕರ ಸಂಚು, ಪಲ್ಲವಿ ಅನುಪಲ್ಲವಿ, ವಂಶವೃಕ್ಷ ಸೇರಿದಂತೆ ಹಲವು ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ಭಾರ್ಗವಿ ನಾರಾಯಣ್ ಅವರು ನಂಜುಡಯ್ಯ ನಾರಾಯಣ ಅವರನ್ನು ವಿವಾಹವಾಗಿದ್ದು ದಂಪತಿಗೆ ನಟರಾದ ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ಸೇರಿ ನಾಲ್ಕು ಮಕ್ಕಳಿದ್ದಾರೆ.

- Advertisement -
spot_img

Latest News

error: Content is protected !!