Wednesday, June 3, 2026
Homeಕರಾವಳಿಉಡುಪಿಉಡುಪಿ:ತೆಕ್ಕಟ್ಟೆ ಬಳಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ

ಉಡುಪಿ:ತೆಕ್ಕಟ್ಟೆ ಬಳಿ ಅರಣ್ಯ ಇಲಾಖೆ ಬೋನಿಗೆ ಬಿದ್ದ ಚಿರತೆ

- Advertisement -
- Advertisement -

ಉಡುಪಿ: ಸಾಕು ಪ್ರಾಣಿಗಳನ್ನು ಹೊತ್ತೊಯ್ಯುತ್ತಿದ್ದ ಚಿರತೆ ಇಂದು ತೆಕ್ಕಟ್ಟೆ ಮಾಲಾಡಿ ಸಮೀಪ ಬೋನಿಗೆ ಬಿದ್ದಿದೆ. ಒಂದು ತಿಂಗಳ ಹಿಂದಿನಿಂದಲೂ ಭೀತಿ ಹುಟ್ಟಿಸಿದ್ದ ಚಿರತೆಯ ಉಪಟಳದಿಂದ ಬೇಸತ್ತಿದ್ದ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

ಮಾಲಾಡಿ ಶ್ರೀ ನಂದಿಕೇಶ್ವರ ದೇವಸ್ಥಾನದ ಬಳಿ ತೋಪಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು ಮುಂಜಾನೆ ಚಿರತೆ ಬಿದ್ದಿದೆ. ಇಂದು ಸೆರೆ ಸಿಕ್ಕಿರುವ ಚಿರತೆ ಹೆಣ್ಣು ಚಿರತೆಯಾಗಿದ್ದು ನಾಲ್ಕರಿಂದ ಐದು ವರ್ಷ ಪ್ರಾಯದ್ದಾಗಿದೆ ಎಂದು ಹೇಳಲಾಗಿದೆ

- Advertisement -

Latest News

error: Content is protected !!