Thursday, June 4, 2026
Homeಕೊಡಗುಕೊಡಗಿನ ಹುತಾತ್ಮ ಯೋಧ ಆಲ್ತಾಫ್ ಅವರಿಗೆ ಅಂತಿಮ ನಮನ

ಕೊಡಗಿನ ಹುತಾತ್ಮ ಯೋಧ ಆಲ್ತಾಫ್ ಅವರಿಗೆ ಅಂತಿಮ ನಮನ

- Advertisement -
- Advertisement -

ಮಡಿಕೇರಿ: ಫೆಬ್ರವರಿ 23 ರಂದು ಜಮ್ಮುವಿನ ಶ್ರೀನಗರದಲ್ಲಿ ಹಿಮಪಾತದಲ್ಲಿ ಹುತಾತ್ಮರಾದ ಯೋಧ ಅಲ್ತಾಫ್ ಅಹ್ಮದ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಗಿದೆ. ವಿರಾಜಪೇಟೆ ತಾಲ್ಲೂಕು ಮೈದಾನದಲ್ಲಿ ಅಂತಿಮ‌ ನಮನ ಸಲ್ಲಿಸಲಾಗಿದ್ದು ಸರ್ಕಾರಿ ಮತ್ತು ಸೇನಾ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.

ಕೊಡಗು ಡಿಸಿ ಡಾ. ಸತೀಶ್ ಮತ್ತು ಎಸ್ಪಿ ಅಯ್ಯಪ್ಪ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು. 21 ಸುತ್ತು ಕುಶಾಲ ತೋಪು ಸಿಡಿಸಿ ಗೌರವ ಸಲ್ಲಿಸಲಾಗಿದ್ದು, ಭಾರತೀಯ ಸೇನೆ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಲಾಗಿದೆ. ಅಂತಿಮ‌ ನಮನದ ವೇಳೆ ಯೋಧ ಆಲ್ತಾಫ್ ಪತ್ನಿ ಜುಬೇರಿಯ ಕುಸಿದು ಬಿದ್ದಿದ್ದು ಯೋಧನ ಮಕ್ಕಳಾದ ಪುತ್ರಿ ಅಸ್ಮಾ ಜಾಸ್ಮಿನ್ ಮತ್ತು ಪುತ್ರ ಮಹಮ್ಮದ್ ಆಫ್ರಿದ್ ಸೇನಾ ಉಡುಪಿನಲ್ಲಿ ಗೌರವ ಸಲ್ಲಿಸಿದರು.

ಇದೇ ವೇಳೆ ಸ್ಥಳೀಯ ನಾಗರಿಕರು ಮತ್ತು ಜಿಲ್ಲೆಯ ನಿವೃತ್ತ ಸೈನಿಕರು ಕೂಡಾ ಗೌರವ ಸಲ್ಲಿಸಿದರು.

- Advertisement -

Latest News

error: Content is protected !!