Thursday, June 4, 2026
Homeಕರಾವಳಿತೊಕ್ಕೊಟ್ಟಿನಲ್ಲಿ ಬ್ಯಾರಿ ಭವನ ಶಿಲಾನ್ಯಾಸಕ್ಕೆ ವಿರೋಧ

ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನ ಶಿಲಾನ್ಯಾಸಕ್ಕೆ ವಿರೋಧ

- Advertisement -
- Advertisement -

ಮಂಗಳೂರು: ಮಂಗಳೂರು ಹೊರವಲಯದ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಬ್ಯಾರಿ ಭವನ ಶಿಲಾನ್ಯಾಸಕ್ಕೆ ವಿರೋಧ ವ್ಯಕ್ತವಾಗಿದೆ.

ಅಬ್ಬಕ್ಕ ಭವನ ನಿರ್ಮಾಣ ವಿಳಂಬವಾದ ಹಿನ್ನೆಲೆಯಲ್ಲಿ ಬ್ಯಾರಿ ಭವನ ಶಿಲಾನ್ಯಾಸಕ್ಕೆ ವಿರೋಧ ಉಂಟಾಗಿದ್ದು ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಬಿಜೆಪಿ- ಹಿಂದೂ ಸಂಘಟನೆ ಕಾರ್ಯಕರ್ತರಿಂದ ಕೂಡಾ ಶಿಲಾನ್ಯಾಸಕ್ಕೆ ವಿರೋಧ ಕೇಳಿ ಬಂದಿದೆ. ಈ ವೇಳೆ ಮಂಗಳೂರು ಶಾಸಕ ಯು.ಟಿ. ಖಾದರ್ ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ‌ ಕೂಡಾ ನಡೆದಿದೆ. ಪ್ರತಿಭಟನೆಯನ್ನು ಲೇವಡಿ ಮಾಡಿರುವ ಶಾಸಕ ಖಾದರ್, ಬಿಜೆಪಿ ಸರಕಾರವೇ ಇರುವಾಗ ಬಿಜೆಪಿ ಕಾರ್ಯಕರ್ತರೇ ಸೇರಿಕೊಂಡು ಪ್ರತಿಭಟಿಸುತ್ತಿರುವುದು ಹಾಸ್ಯಾಸ್ಪದ,
ಪ್ರತಿಭಟಿಸುವ ಬದಲು ತಮ್ಮ ಸರಕಾರದ ಮೂಲಕ ಯೋಜನೆಯನ್ನು ನಿಲ್ಲಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಮಧ್ಯೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಅನುಪಸ್ಥಿತಿ ಇತ್ತು.

- Advertisement -

Latest News

error: Content is protected !!