Saturday, December 14, 2024
Homeತಾಜಾ ಸುದ್ದಿಕಾಶ್ಮೀರ : ಲಷ್ಕರ್ ಇ ತೋಯ್ಬಾ ಕಮಾಂಡರ್ ಬೇಟೆಯಾಡಿದ ರಕ್ಷಣಾ ಪಡೆ

ಕಾಶ್ಮೀರ : ಲಷ್ಕರ್ ಇ ತೋಯ್ಬಾ ಕಮಾಂಡರ್ ಬೇಟೆಯಾಡಿದ ರಕ್ಷಣಾ ಪಡೆ

spot_img
- Advertisement -
- Advertisement -

ಶ್ರೀನಗರ : ಕಾಶ್ಮೀರ ಕಣಿವೆಯ ಹಂದ್ವಾರದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಲಷ್ಕರ್ ಇ ತೋಯ್ಬಾದ ಕಮಾಂಡರ್​ ಹೈದರ್​​​ನನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಐಜಿ ವಿಜಯ್​ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಹೈದರ್ ಪಾಕಿಸ್ತಾನದವನಾಗಿದ್ದು, ಬೆಳಗ್ಗೆ ಉಗ್ರರು ಭಾರತೀಯ ಯೋಧರ ಮೇಲೆ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ಈ ವೇಳೆ ಸೇನೆಯ ಇಬ್ಬರು ಅಧಿಕಾರಿಗಳು ಸೇರಿದಂತೆ, ಐವರು ಯೋಧರು ಹುತಾತ್ಮರಾಗಿದ್ದರು. ಭಾರತೀಯ ಸೇನೆ ದಾಳಿಗೆ ಇಬ್ಬರು ಭಯೋತ್ಪಾದಕರು ಹತರಾಗಿದ್ದರು.

ಈ ಕುರಿತಂತೆ ಮಾತನಾಡಿರುವ ಕಾಶ್ಮೀರ ಐಜಿ ವಿಜಯ್​ಕುಮಾರ್​ ಲಷ್ಕರ್ ಇ ತೋಯ್ಬಾದ ಕಮಾಂಡರ್​ನನ್ನು ಹತ್ಯೆ ಮಾಡಲಾಗಿದೆ. ಉಗ್ರರ ಗುರುತು ಪತ್ತೆ ಹಚ್ಚಿದ ನಂತರ, ಅದರಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್‌ ಇ ತೊಯ್ಬಾದ ಟಾಪ್‌ ಕಮಾಂಡರ್‌ ಹೈದರ್‌ ಕೂಡ ಎನ್‌ಕೌಂಟರ್‌ ಆಗಿದ್ದಾನೆ ಎಂದು ತಿಳಿದುಬಂದಿದೆ. ಇತನನ್ನು ಹೈದರ್‌ ಇ ಕ್ರಾರ್‌ ಎಂದು ಗುರುತಿಸಲಾಗಿದ್ದು, ಲಷ್ಕರ್‌ ಎ ತೊಯ್ಬಾದ ಬಂಡಿಪೊರದ ಡೆಪ್ಯುಟಿ ಕಮಾಂಡರ್‌ ಆಗಿದ್ದ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!