ಬೆಳ್ತಂಗಡಿ : ‘ಮಾರಕ ಕೊರೊನಾ ಕಾಯಿಲೆಯ ಭಯಾನಕತೆಯ ಕುರಿತಾಗಿ ಜಾಗೃತಿ ಮೂಡಿಸಿ, ಸುದ್ದಿಯನ್ನು ತಲುಪಿಸುವಲ್ಲಿ ಪತ್ರಕರ್ತರ ಕಾರ್ಯ ಶ್ಲಾಘನೀಯವಾದುದು. ಸಮಾಜದಲ್ಲಿ ಕೊರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಪೊಲೀಸರ ಕಾರ್ಯದಂತೆ ಪತ್ರಕರ್ತರ ಕಾರ್ಯವೂ ಮಹತ್ವದ್ದಾಗಿದ್ದು, ಅವರ ಆರೋಗ್ಯ ಸುರಕ್ಷತೆಯೂ ಅತಿ ಮುಖ್ಯವಾಗಿದೆ’ ಎಂದು ಬೆಳ್ತಂಗಡಿ ರೋಟರಿ ಕ್ಲಬ್‍ನ ನಿಯೋಜಿತ ಅಧ್ಯಕ್ಷ ಬಿ.ಕೆ. ಧನಂಜಯ ರಾವ್ ಹೇಳಿದರು.
ಅವರು ಭಾನುವಾರ ಬೆಳ್ತಂಗಡಿ ಬಸ್ ಸ್ಟ್ಯಾಂಡ್ ಬಳಿಯ ವಾರ್ತಾಭವನದ ಕೆಳಗೆ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ಪತ್ರಕರ್ತರ ಆರೋಗ್ಯ ರಕ್ಷಣೆಗಾಗಿ ತಾಲೂಕು ಪತ್ರಕರ್ತರ ಸಂಘಕ್ಕೆ ಸ್ಯಾನಿಟರಿ ಯಂತ್ರ ಹಸ್ತಾಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಪತ್ರಕರ್ತರ ಸಂಘದ ಕಾರ್ಯದರ್ಶಿ ಮನೋಹರ್ ಬಳಂಜ ಸ್ವಾಗತಿಸಿ ಮಾತನಾಡಿ, ‘ಅನೇಕ ಸೇವಾ ಚಟುವಟಿಕೆಗಳೊಂದಿಗೆ ತಾಲೂಕಿನ ಹಿತ ಕಾಯುವಲ್ಲಿ ರೋಟರಿ ಸಂಸ್ಥೆಯ ಪಾತ್ರ ಮುಖ್ಯವಾಗಿದೆ. ಕೊರೊನಾ ವಿರುದ್ಧವಾದ ಹೋರಾಟದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಬಡ ಕುಟುಂಬಗಳಿಗೆ ಕಿಟ್, ಕಾರ್ಮಿಕರಿಗೆ ಮಾಸ್ಕ್ ವಿತರಣೆ ಜೊತೆಗೆ ತಾಲೂಕಿನ ಎಲ್ಲಾ ಶಾಲೆಗಳಿಗೂ ಸ್ಯಾನಿಟರಿ ಯಂತ್ರ ನೀಡುವ ಸಂಸ್ಥೆಯ ಕಾರ್ಯ ಮಹತ್ತರವಾದುದು. ಇಂತಹ ಸಂಸ್ಥೆ ಪತ್ರಕರ್ತರ ಬಗೆಗೂ ಅಪಾರ ಕಾಳಜಿ ಬೆಳೆಸಿಕೊಂಡಿರುವುದು ಹೆಮ್ಮೆಯ ವಿಚಾರ’ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್ ಸ್ಯಾನಿಟರಿ ಯಂತ್ರವನ್ನು, ನಿಯೋಜಿತ ಕಾರ್ಯದರ್ಶಿ ಶ್ರೀಧರ ಕೆ.ವಿ. ಸ್ಯಾನಿಟರಿ ಬಾಟಲ್‍ಗಳನ್ನು ಸಂಘಕ್ಕೆ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ರೋಟರಿ ಸದಸ್ಯ ಡಾ.ಗೋವಿಂದ ಕಿಶೋರ್, ಪತ್ರಕರ್ತರ ಸಂಘದ ಸದಸ್ಯರು ಉಪಸ್ಥಿತರಿದ್ದರು
ಪತ್ರಕರ್ತರ ಆರೋಗ್ಯ ಸುರಕ್ಷತೆಯೂ ಅತಿ ಮುಖ್ಯವಾದುದು : ಧನಂಜಯ ರಾವ್
- Advertisement -
- Advertisement -
- Advertisement -