Thursday, June 4, 2026
Homeಕರಾವಳಿಬೆಳ್ತಂಗಡಿ: ಭೂ ವಿವಾದ, ಕೊಯ್ಯೂರಿನ ವ್ಯಕ್ತಿ ಮೇಲೆ ಹಲ್ಲೆ..!

ಬೆಳ್ತಂಗಡಿ: ಭೂ ವಿವಾದ, ಕೊಯ್ಯೂರಿನ ವ್ಯಕ್ತಿ ಮೇಲೆ ಹಲ್ಲೆ..!

- Advertisement -
- Advertisement -

ಬೆಳ್ತಂಗಡಿ: ಬೀಜದಡಿ ನಿವಾಸಿ ಪ್ರಮೋದ್ ಎಂಬಾತ ಮರದ ದೊಣ್ಣೆಯಿಂದ ಕೊಯ್ಯೂರು ಗ್ರಾಮದ ಬೀಜದಡಿ ನಿವಾಸಿ ವೆಂಕಪ್ಪ ಗೌಡ (40) ಎಂಬವರಿಗೆ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ.

ಜಮೀನಿನ ವ್ಯಾಜ್ಯಕ್ಕೆ ಕುರಿತು ಆರೋಪಿ ಪ್ರಮೋದ್ ಮನೆಗೆ ಅಕ್ರಮ ಪ್ರವೇಶಗೈದು ಏಕಾಏಕಿ ಮರದ ದೊಣ್ಣೆಯಿಂದ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ವೆಂಕಪ್ಪ ಗೌಡರ ಬೊಬ್ಬೆ ಕೇಳಿ ಅಕ್ಕಪಕ್ಕದ ಮನೆಯವರು, ಸ್ಥಳೀಯರು ಓಡಿ ಬಂದು ವೆಂಕಪ್ಪ ಗೌಡರನ್ನು ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಕ್ರಿಮಿನಲ್ ಹಿನ್ನೆಲೆ ಹೊಂದಿದ ಆರೋಪಿ ಪ್ರಮೋದ್ ಈ ಹಿಂದೆ ವೆಂಕಪ್ಪ ಗೌಡ ಹಾಗೂ ಅವರ ಸಹೋದರನ ಮೇಲೆ ತಲಾವಾರು ದಾಳಿ ನಡೆಸಿದ ಆರೋಪ ಎದುರಿಸುತ್ತಿದ್ದಾನೆ. ಬೆಳ್ತಂಗಡಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ , ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!