- Advertisement -
- Advertisement -
ಉಡುಪಿ: ಇಲ್ಲಿನ ವ್ಯಕ್ತಿಯೋರ್ವ ಆನ್‌ಲೈನ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂ. ಕಳೆದುಕೊಂಡ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಕಿನ್ನಿಮುಲ್ಕಿಯ ಜಾರ್ಜ್ ರಫಾಯಲ್ ಮಚಾದೋ(65) ವಂಚನೆಗೊಳಗಾದ ವ್ಯಕ್ತಿ. ಇವರು ಆನ್ ಲೈನ್ ನಲ್ಲಿ ಡಿ.20ರಿಂದ ಜ.25ರ ಮಧ್ಯಾವಧಿ ಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್ ಲೈನ್ ಮೂಲಕ ಒಟ್ಟು 3,19,460ರೂ. ಹಣವನ್ನು ಹೂಡಿಕೆ ಮಾಡಿದ್ದರು.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿದ್ದು, ಇದೀಗ ಆರೋಪಿಗಳು ಹೂಡಿಕೆ ಮಾಡಿರುವ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುವುದಾಗಿ ದೂರನ್ನು ದಾಖಲಿಸಿದ್ದಾರೆ.
- Advertisement -