Wednesday, June 3, 2026
Homeಕರಾವಳಿಮಂಗಳೂರುಬೆಳ್ತಂಗಡಿ ನ್ಯಾಯಾಲಯದಲ್ಲಿನ ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆ

ಬೆಳ್ತಂಗಡಿ ನ್ಯಾಯಾಲಯದಲ್ಲಿನ ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆ

- Advertisement -
- Advertisement -

ಬೆಳ್ತಂಗಡಿ ;ಮಹಮ್ಮದ್ ರಫೀಕ್ ಎಂಬರಿಂದ ಶಿಯಾಬುದ್ದೀನ್ ಎಂಬವರು ರೂಪಾಯಿ 3,00,000/- ಹಣವನ್ನು  ಸಾಲವಾಗಿ  ಪಡೆದುಕೊಂಡು, ಸದ್ರಿ ಸಾಲದ ಮರುಪಾವತಿಗಾಗಿ ಚೆಕ್ಕನ್ನು ನೀಡಿದ್ದಾರೆಂದು ಆರೋಪಿಸಿ ಮಹಮ್ಮದ್ ರಫೀಕ್ ಎಂಬವರು ಶಿಯಾಬುದ್ದೀನ್ ಎಂಬವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವನ್ನು ಹಾಗೂ ಸೂರ್ಯನಾರಾಯಣ ವಿ ಆರ್ ಎಂಬವರಿಂದ  ಚೇತನ್ ಪಿ ಎಂಬವರು ರೂಪಾಯಿ  2,56,000/- ಸಾಲವಾಗಿ ಪಡೆದುಕೊಂಡು ಸದ್ರಿ ಸಾಲದ ಮರುಪಾವತಿಗಾಗಿ ಚೆಕ್ಕನ್ನು ನೀಡಿದ್ದಾರೆಂದು ಆರೋಪಿಸಿ ಸೂರ್ಯನಾರಾಯಣ ವಿ ಆರ್ ಎಂಬುವರು ಚೇತನ್ ಪಿ ಎಂಬವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವನ್ನು ಹಾಗೂ ಪ್ರಕಾಶ್ ರಾವ್ ಎಂಬವರಿಂದ ಹಾರಿಸ್ ಎಂಬವರು ರೂಪಾಯಿ 40,000/- ಸಾಲವಾಗಿ ಪಡೆದುಕೊಂಡು ಸದ್ರಿ ಸಾಲದ ಮರುಪಾವತಿಗಾಗಿ ಹಾರಿಸ್ ಎಂಬವರು ಚೆಕ್ಕನ್ನು ನೀಡಿದ್ದಾರೆ ಎಂದು ಆರೋಪಿಸಿ ಪ್ರಕಾಶ್ ರಾವ್ ಎಂಬವರು ಹಾರಿಸ್ ಎಂಬವರ ವಿರುದ್ಧ ಚೆಕ್ ಬೌನ್ಸ್ ಪ್ರಕರಣವನ್ನು ಹಾಗೂ  ಲ್ಯಾಂಪ್ ಸೊಸೈಟಿ, ಬೆಳ್ತಂಗಡಿ ಶಾಖೆಯಲ್ಲಿ ಜಯಶ್ರೀ ಎಂಬವರು ಪಡೆದುಕೊಂಡಿರುವ ಸಾಲದ ಮರುಪಾವತಿಗಾಗಿ ನೀಡಿರುವ ರೂಪಾಯಿ 49,576/- ಮೊತ್ತದ ಚೆಕ್ಕನ್ನು ಬ್ಯಾಂಕಿಗೆ ನಗದೀಕರಣಕ್ಕಾಗಿ ಹಾಜರುಪಡಿಸಿದಾಗ ಚೆಕ್ ಅಮಾನ್ಯಗೊಂಡಿರುವುದಾಗಿ ಆರೋಪಿಸಿ ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ  ದಾಖಲಿಸಿದ್ದ ಚೆಕ್ ಬೌನ್ಸ್ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿದ್ದು, ಈ ಮೇಲಿನ ಎಲ್ಲಾ ಪ್ರಕರಣವನ್ನು  ವಿಚಾರಣೆ ನಡೆಸಿರುವ  ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರಾದ ಮನು ಬಿಕೆ ರವರು ಈ ಮೇಲಿನ ಎಲ್ಲಾ ಪ್ರಕರಣದ ಆರೋಪಿಗಳಾದ  ಶಿಯಾಬುದ್ದೀನ್, ಚೇತನ್ ಪಿ, ಹ್ಯಾರಿಸ್, ಜಯಶ್ರೀ ಎಂಬುವರನ್ನು  ನಿರಪರಾಧಿ ಎಂಬುದಾಗಿ ತೀರ್ಪು ನೀಡಿರುತ್ತಾರೆ.

ವೇಣೂರು ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ: 31/2022 ರಂತೆ ಇಬ್ರಾಹಿಂ ಕಲೀಲ್ ಮತ್ತು ಮೊಹಮ್ಮದ್ ಯಾಸಿರ್ ಎಂಬುವರ ವಿರುದ್ಧ ಕರ್ನಾಟಕ ಪ್ರಾಣಿವಧೆ ಪ್ರತಿಬಂದಕ ಕಾಯ್ದೆ 2020 ರ ಕಲಂ 5, 7, 12 ರಂತೆ ದಾಖಲಾಗಿದ್ದ ಪ್ರಕರಣವನ್ನು ವಿಚಾರಣೆ ನಡೆಸಿದ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ನ್ಯಾಯಾಧೀಶರು ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿರುತ್ತಾರೆ.

ಬೆಳ್ತಂಗಡಿ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ: 55/2019 ರಂತೆ ಕುವೆಟ್ಟು ಗ್ರಾಮದ ನಿವಾಸಿಯಾದ ಮೊಹಮ್ಮದ್ ಇರ್ಷಾದ್  ಎಂಬವರ ವಿರುದ್ಧ ಭಾರತೀಯ ದಂಡ ಸಹಿತೆಯ ಕಲಂ 353, 506 ರಂತೆ ದಾಖಲಾಗಿದ್ದ ಪ್ರಕರಣ, ಬೆಳ್ತಂಗಡಿ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ: 208/2018 ರಂತೆ ಕುವೆಟ್ಟು ಗ್ರಾಮದ ಮಹಮ್ಮದ್ ರಫೀಕ್ ಎಂಬವರ ವಿರುದ್ಧ ಭಾರತೀಯ ದಂಡ ಸಹಿತೆಯ ಕಲಂ 353, 504, ಮತ್ತು 506 ರಂತೆ ದಾಖಲಾಗಿದ್ದ ಪ್ರಕರಣ, ಬೆಳ್ತಂಗಡಿ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ: 170/2022 ರಂತೆ ಬೇಲೂರು ನಿವಾಸಿಯಾದ ಜಾಫರ್ ಸಾಧಿಕ್  ಎಂಬವರ ವಿರುದ್ಧ ಭಾರತೀಯ ದಂಡ ಸಹಿತೆಯ ಕಲಂ 279, 304(ಎ) ರಂತೆ ದಾಖಲಾಗಿದ್ದ ಅಪಘಾತ ಪ್ರಕರಣ ಹಾಗೂ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ: 93/2021 ರಂತೆ ಕಕ್ಕಿಂಜೆ ನಿವಾಸಿಯಾದ ಮೊಹಮ್ಮದ ಅನ್ಸರ್ ಎಂಬವರ ವಿರುದ್ಧ ಭಾರತೀಯ ದಂಡ ಸಹಿತೆಯ ಕಲಂ 279, 304(ಎ) ರಂತೆ ದಾಖಲಾಗಿದ್ದ ಅಪಘಾತ ಪ್ರಕರಣ,ಈ ಮೇಲಿನ ಎಲ್ಲಾ ಪ್ರಕರಣಗಳನ್ನು ವಿಚಾರಣೆ ನಡೆಸಿರುವ ಬೆಳ್ತಂಗಡಿ ಪ್ರಧಾನ ಸಿವಿಲ್ ಮತ್ತು ಜೆ ಎಂ ಎಫ್ ಸಿ  ನ್ಯಾಯಾಲಯದ ನ್ಯಾಯಾಧೀಶರು ಈ ಮೇಲಿನ ಎಲ್ಲಾ ಪ್ರಕರಣಗಳ ಆರೋಪಿಗಳನ್ನು  ದೋಷ ಮುಕ್ತಗೊಳಿಸಿ ಬಿಡುಗಡೆಗೊಳಿಸಿರುತ್ತಾರೆ.

ಈ ಮೇಲಿನ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ಲೆಕ್ಸ್ ವಿಷನ್ ಲಾ ಚೇಂಬರ್ ನ ವಕೀಲರುಗಳಾದ  ನವಾಜ್ ಶರೀಫ್ ಎ, ಮಮ್ತಾಜ್ ಬೇಗಂ, ಇರ್ಷಾದ್, ಸಪ್ನಾಝ್, ಸಂಪ್ರೀತಿ, ಯಕ್ಷಿತಾ, ಶಶಿಧರ ರವರು ವಾದ ಮಂಡಿಸಿದ್ದರು.

- Advertisement -

Latest News

error: Content is protected !!