Thursday, June 25, 2026
Homeಕರಾವಳಿಬಂಟ್ವಾಳ; ಪತಿಯ ಸ್ನೇಹಿತನನ್ನು ನಂಬಿ ಆತನ ಹಿಂದೆ ಹೋದ ಮೂರು ಮಕ್ಕಳ ತಾಯಿ; ಈಗ ನನ್ಗೆ...

ಬಂಟ್ವಾಳ; ಪತಿಯ ಸ್ನೇಹಿತನನ್ನು ನಂಬಿ ಆತನ ಹಿಂದೆ ಹೋದ ಮೂರು ಮಕ್ಕಳ ತಾಯಿ; ಈಗ ನನ್ಗೆ ಅನ್ಯಾಯವಾಗಿದೆ ಎಂದು ಪೊಲೀಸ್ ಮೆಟ್ಟಿಲೇರಿದ ಮಹಿಳೆ

- Advertisement -
- Advertisement -

ಬಂಟ್ವಾಳ; ಪತಿಯ ಸ್ನೇಹಿತನನ್ನು ನಂಬಿ ಆತನ ಹಿಂದೆ ಹೋದ ಮೂರು ಮಕ್ಕಳ ತಾಯಿ ಇದೀಗ ನನಗೆ ಆತನಿಂದ ಅನ್ಯಾಯವಾಗಿದೆ ಎಂದು ಪೊಲೀಸ್ ಮೆಟ್ಟಿಲೇರಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ತಾಲೂಕಿನ ನ ಲೊರೆಟ್ಟೊ ನಿವಾಸಿಯಾದ ಸಂತ್ರಸ್ಥೆಯ ಗಂಡನ ಸ್ನೇಹಿತನಾದ ನರಿಕೊಂಬು ನಿವಾಸಿ ತಸ್ಲೀಂ ಆರೀಫ್ ಗಂಡನ ಜೊತೆ ಮನೆಗೆ ಬರುತ್ತಿದ್ದ. ಈ ವೇಳೆ ಸಂತ್ರಸ್ತೆಯ ಜೊತೆ ಸಲುಗೆ ಉಂಟಾಗಿ ಮೊಬೈಲ್ ನಂಬ್ರ ಪಡೆದಿದ್ದ. ಅಲ್ಲೇ ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ. ಇದೇ ಸಲುಗೆ ಬರ ಬರುತ್ತಾ ದೈಹಿಕ ಸಂಪರ್ಕಕ್ಕೆ ತಿರುಗಿದೆ. ಅಲ್ಲದೇ ಆರೋಪಿ ತಸ್ಲೀಂ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ಸಂತ್ರಸ್ತೆಯನ್ನು ನಂಬಿಸಿ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ.

ಈ ನಡುವೆ ಇವರಿಬ್ಬರ ನಡುವಿನ ಪ್ರೇಮ ಪ್ರಕರಣ, ಮತ್ತು ದೈಹಿಕ ಸಂಪರ್ಕ  ವಿಚಾರ ಗಂಡನಿಗೆ ಗೊತ್ತಾಗಿ ಅವಳಿಂದ ದೂರ ಇದ್ದ. ನಂತರ ಆರೋಪಿಯೊಂದಿಗೆ ಸಂತ್ರಸ್ಥೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. 3 ತಿಂಗಳ ಹಿಂದೆ ಆರೋಪಿ ತಸ್ಲೀಂ  ಸಂತ್ರಸ್ಥ ಮಹಿಳೆಯನ್ನು ಪಾಣೆಮಂಗಳೂರು ಗ್ರಾಮದ ಜೈನರ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿ ಕೂರಿಸಿದ್ದ. ಇದೀಗ ಆರೋಪಿ ತಸ್ಲೀಂ ಕುಲ್ಲಕ ಕಾರಣಕ್ಕೆ ಸಂತ್ರಸ್ಥೆಯ ಮುಖಕ್ಕೆ, ಬಾಯಿಗೆ ಕೈಯಿಂದ ಹೊಡೆದು, ಬಲಕಾಲಿನಿಂದ ಎಡ ಸೊಂಟಕ್ಕೆ ಒದ್ದಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ಥೆ ರೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ

- Advertisement -

Latest News

error: Content is protected !!