Thursday, June 4, 2026
Homeತಾಜಾ ಸುದ್ದಿಪದೇ ಪದೇ ಸಾಯ್ತೀನಿ ಅಂತಿಯಾ ಸಾಯಿ ನೋಡೋಣ ಅಂದ ಪ್ರಿಯಕರ: ಕೊನೆಗೆ ಆಂಟಿ ಮಾಡಿದ್ದೇನು ಗೊತ್ತಾ?

ಪದೇ ಪದೇ ಸಾಯ್ತೀನಿ ಅಂತಿಯಾ ಸಾಯಿ ನೋಡೋಣ ಅಂದ ಪ್ರಿಯಕರ: ಕೊನೆಗೆ ಆಂಟಿ ಮಾಡಿದ್ದೇನು ಗೊತ್ತಾ?

- Advertisement -
- Advertisement -

ಚಿಕ್ಕಮಗಳೂರು: ವಿವಾಹಿತ ಮಹಿಳೆಯೋರ್ವಳು ಪ್ರಿಯಕರನ ಪ್ರೀತಿಗಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳ ಗ್ರಾಮದಲ್ಲಿ ವರದಿಯಾಗಿದೆ. ಬಿಳಗುಳ ನಿವಾಸಿ ಸವಿತಾ (42) ಎಂಬುವವರು ತಮ್ಮ ವೈಯುಕ್ತಿಕ ಕಾರಣದಿಂದ ಪತಿಯನ್ನು ಬಿಟ್ಟು ತವರು ಮನೆಗೆ ಬಂದು ಹೋಂ ಸ್ಟೇ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರಂತೆ. ಇದೇ ವೇಳೆ ಅಲ್ಲೇ ದುರ್ಗಾ ಪರಮೇಶ್ವರಿ ಎಸ್ಟೇಟ್​ನಲ್ಲಿ ರೈಟರ್ ಆಗಿ ಕೆಲಸ ಮಾಡ್ತಿದ್ದ ಕೊಲ್ಲಿಬೈಲ್​ ನಿವಾಸಿ ನಂದೀಶ (28) ಎಂಬುವವನ ಪರಿಚಯವಾಗಿ ಅದು ಪ್ರೀತಿಗೆ ತಿರುಗಿದೆ.

ಈ ವೇಳೆ ಇಬ್ಬರ ಪ್ರೀತಿಯ ನಡುವೆ ಬಿರುಕು ಮೂಡಲು ಶುರುವಾಗಿದೆ. ಹೀಗಿರುವಾಗ ಕಳೆದ ಭಾನುವಾರ ಸವಿತಾ ನಂದಿಶ್‌ಗೆ ಪೆಟ್ರೋಲ್ ಸುರಿದುಕೊಂಡು ಸಾಯುತ್ತೇನೆ ಎಂದು ಬೆದರಿಕೆ ಹಾಕಿದ್ದಕ್ಕೆ ನಿಂದು ಬರೀ ಇದೆ ಆಯ್ತು, ಹಾಗಿದ್ರೆ ಸಾಯಿ ನೋಡೋಣ, ನಾನು ಬೆಂಕಿ ಪೊಟ್ಟಣ ತರ್ತೀನಿ ಅಂತಾ ನಂದೀಶ್ ಹೇಳಿದ್ದನಂತೆ.

ಇದರಿಂದ ಕುಪಿತಳಾದ ಸವಿತಾ ನಂದಿಶ್‌ ಕೆಲಸ ಮಾಡುತ್ತಿದ್ದ ಎಸ್ಟೇಟ್‌ ಮುಂಭಾಗಕ್ಕೆ ಆಗಮಿಸಿ ಪೆಟ್ರೋಲ್‌ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಘಟನೆಯಲ್ಲಿ ನಂದೀಶನ ಎರಡು ಕೈಗಳು ಸುಟ್ಟು ಹೋಗಿದ್ದು, ಆತನು ಕೂಡ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಆದರೆ ಘಟನೆಯಲ್ಲಿಯಲ್ಲಿ ಸವಿತಾ ಸಾವನ್ನಪ್ಪಿದ್ದಾರೆ.

ಆದರೆ ಘಟನೆಗೆ ಸಂಬಂಧಪಟ್ಟಂತೆ ನಾನಾ ಪ್ರಶ್ನೆಗಳು ಉದ್ಬವಿಸುತ್ತಿದ್ದು, ನಂದಿಶನೇ ಸವಿತಳಿಗೆ ಪೆಟ್ರೋಲ್‌ ಹಾಕಿ ಸಾಯಿಸಿದ್ದಾನೆ ಅಂಥ ಸವಿತಾ ಸಂಬಂಧಿಕರು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!