Wednesday, May 15, 2024
Homeತಾಜಾ ಸುದ್ದಿಕರ್ನಾಟಕ ಬಂದ್ ಹೇಗಿದೆ? ಕನ್ನಡಪರ ಸಂಘಟನೆಗಳ ಬಂದ್ ನೀರಸ?

ಕರ್ನಾಟಕ ಬಂದ್ ಹೇಗಿದೆ? ಕನ್ನಡಪರ ಸಂಘಟನೆಗಳ ಬಂದ್ ನೀರಸ?

spot_img
- Advertisement -
- Advertisement -

ಬೆಂಗಳೂರು: ಹಲವು ದಿನಗಳಿಂದ ಸದ್ದು ಮಾಡುತ್ತಿದ್ದ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಬಂದ್ ಇಂದು ನಡೆಯುತ್ತಿದೆ. ಮರಾಠ ಅಭಿವೃದ್ಧಿ ನಿಗಮ ರಚನೆ ವಿರುದ್ಧ ಕರೆ ಕೊಟ್ಟಿರುವ ರಾಜ್ಯ ಬಂದ್ ಈಗಾಗಲೇ ಆರಂಭವಾಗಿದೆ. ನಿನ್ನೆ ಮುಖ್ಯಮಂತ್ರಿಗಳು ಬಂದ್ ಬೇಡ ಎಂದು ಸೂಚನೆ ನೀಡಿದ್ದರು. ಆದರೆ ಕನ್ನಡಪರ ಸಂಘಟನೆಗಳು ಬಂದ್ ಒಂದು ಸವಾಲು ಎಂದು ಸ್ವೀಕರಿಸುವುದಾಗಿ ತಿಳಿಸಿದ್ದರು.

ಈವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿ ಜನಜೀವನ ಎಂದಿನಂತೆಯೇ ಇದ್ದು ಬಂದ್ ನೀರಸವಾಗಿದೆ.ಕೆಎಸ್‌ಆರ್ಟಿಸಿ, ಬಿಎಂಟಿಸಿ ಬಸ್ ಗಳು ಎಂದಿನಂತ ತಮ್ಮ ಕಾರ್ಯ ಆರಂಭಿಸಿವೆ.ಚಿತ್ರದುರ್ಗ, ಕೆ ಆರ್ ಮಾರ್ಕೆಟ್ , ಚಾಮರಾಜ ನಗರ, ಮಂಡ್ಯ, ಆನೆಕಲ್ಲುಗಳಲ್ಲಿ ಬಂದ್ ಪ್ರಯತ್ನ ನಡೆದಿದ್ದು ಈಗಾಗಲೇ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಬಂದ್‍ಗೆ ಬಹುತೇಕ ಎಲ್ಲರೂ ಕೈ ಜೋಡಿಸಿದ್ದಾರೆ. ಹಲವರು ಬಂದ್‍ಗೆ ಪ್ರತ್ಯಕ್ಷ ಬೆಂಬಲ ನೀಡಿ ಹೋರಾಟಕ್ಕಿಳಿದರೆ, ಮತ್ತೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿವೆ. ಫುಟ್‍ಪಾತ್ ವ್ಯಾಪಾರಿಗಳು, ಎಪಿಎಂಸಿ ವರ್ತಕರು ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲೂ ಬಂದ್ ಕಾವು ಈಗಾಗಲೇ ಆರಂಭಗೊಂಡಿದೆ. ಟ್ಯಾಕ್ಸಿ, ಆಟೋ, ಓಲಾ, ಊಬರ್ ಸಂಘಟನೆಗಳವರು ಬಂದ್‍ಗೆ ಬೆಂಬಲ ಘೋಷಿಸಿ ರಸ್ತೆಗಿಳಿಯುವುದಿಲ್ಲ ಎಂದು ಹೇಳಿವೆ.

- Advertisement -
spot_img

Latest News

error: Content is protected !!